Wednesday, November 4, 2026
ಸುದ್ದಿ

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ(ರಿ.) ಬೆಳ್ತಂಗಡಿ ಇದರ 3ನೇ ಕಲ್ಲಡ್ಕ ಶಾಖೆಯಲ್ಲಿ ” ಗ್ರಾಹಕರೊಂದಿಗೆ ಒಂದು ದಿನ ” ಕಾರ್ಯಕ್ರಮ – ಕಹಳೆ ನ್ಯೂಸ್

ಕಲ್ಲಡ್ಕ : ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ( ರಿ) ಬೆಳ್ತಂಗಡಿ ಇದರ 3ನೇ ಕಲ್ಲಡ್ಕ ಶಾಖೆಯು 9 ವರ್ಷಗಳನ್ನು ಪೂರೈಸಿ 10 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸುಸಂದರ್ಭರಲ್ಲಿ ಸಂಘದ ಅತ್ಯುತ್ತಮ ಬೆಳವಣಿಗೆಗೆ ಕಾರಣರಾದ ಗ್ರಾಹಕರೊಂದಿಗೆ ಮುಕ್ತವಾಗಿ ಬೆರೆಯಲು ” ಗ್ರಾಹಕರೊಂದಿಗೆ ಒಂದು ದಿನ ” ಕಾರ್ಯಕ್ರಮ ಕಲ್ಲಡ್ಕ ಶಾಖಾ ಕಚೇರಿಯಲ್ಲಿ ನಡೆಯಿತು.

ಜಾಹೀರಾತು

ಸಂಘದ ಅಧ್ಯಕ್ಷರಾದ ಶ್ರೀಯುತ ಪದ್ಮನಾಭ ಮಣಿಂಜ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಗ್ರಾಹಕರೇ ಬ್ಯಾಂಕಿನ ಆಸ್ತಿಯಾಗಿದ್ದಾರೆ. ಉತ್ತಮ ರೀತಿಯ ಸೇವೆ ನೀಡುವುದರಲ್ಲಿ ಶ್ರೀ ಗುರುದೇವ ಬ್ಯಾಂಕ್ ಬದ್ಧವಾಗಿದೆ ಹಾಗೂ ಗ್ರಾಹಕರ ಬೇಡಿಕೆಗೆ ತಕ್ಕಂತೆ ಯಾವುದೇ ತಡ ಮಾಡದೆ ಕ್ಷಿಪ್ರಾವಾಗಿ ಸಾಲ ವಿತರಣೆ ಮಾಡಲಾಗುವುದು ಎಂದರು. ಹಾಗೂ ಸಹಕಾರಿ ಸಂಘದ ಇನ್ನಷ್ಟು ಬೆಳವಣಿಗೆಗೆ ಗ್ರಾಹಕರ ಹಾಗೂ ಸದಸ್ಯರ ಸಲಹೆಯನ್ನು ಪಡೆದುಕೊಂಡರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ವೇದಿಕೆಯಲ್ಲಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶ್ರೀಯುತ ಅಶ್ವತ್ ಕುಮಾರ್, ಬ್ಯಾಂಕಿನ ಸ್ಪೆಷಲ್ ಆಫೀಸರ್ ಶ್ರೀಯುತ ಮೋನಪ್ಪ ಪೂಜಾರಿ ಕಂಡೆತ್ಯಾರು, ನೆಚ್ಚಿನ ಗ್ರಾಹಕರಾದ ನಾರಾಯಣ ಪಿ ಕೋಟ್ಯಾನ್, ಆನಂದ ಸಪಲ್ಯ ಉಪಸ್ಥಿತರಿದ್ದರು.

ಕಲ್ಲಡ್ಕ ಶಾಖ ವ್ಯವಸ್ಥಾಪಕ ಶ್ರೀಯುತ ಮನೋಹರ್ ಸ್ವಾಗತಿಸಿ, ಶ್ರೀಯುತ ಮೋನಪ್ಪ ಪೂಜಾರಿ ಪ್ರಸ್ತಾವಿಕ ಮಾತನಾಡಿ, ಶ್ರೀಮತಿ ಬಬಿತಾ ವಂದಿಸಿದರು.