Wednesday, September 9, 2026
ಸುದ್ದಿ

ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಿ, ಲವ್ ಜಿಹಾದ್ ಘಟನೆಗಳನ್ನು ತಡೆಯಲು ವಿಶೇಷ ಲವ್ ಜಿಹಾದ್ ವಿರೋಧಿ ಪೋಲಿಸ್ ದಳವನ್ನು ಸ್ಥಾಪಿಸುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹ – ಕಹಳೆ ನ್ಯೂಸ್

ಸದ್ಯ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಲವ್ ಜಿಹಾದ್ ತಡೆಯಲು ಸಾದ್ಯವಾಗುತ್ತಿಲ್ಲ. ಲವ್ ಜಿಹಾದ್ ಮೂಲಕ ಹಿಂದೂ ಯುವತಿಯರನ್ನು ಇಸ್ಲಾಮ್‌ಗೆ ಮತಾಂತರ ಮಾಡುವ ಘಟನೆಗಳು ಹೆಚ್ಚುತ್ತಿವೆ. ಆದರೆ ಈ ಘಟನೆಗಳು ಮತಾಂತರ ಪ್ರಕರಣವೆಂದು ದಾಖಲಾಗುವುದಿಲ್ಲ. ಈ ಗಂಭೀರ ಸಮಸ್ಯೆಗೆ ಪರಿಹಾರವಾಗಿ ರಾಜ್ಯದಲ್ಲಿ ಸಹ ಉತ್ತರ ಪ್ರದೇಶದ ಮಾದರಿಯಲ್ಲಿ ಮತಾಂತರ ನಿಷೇಧ ಕಾಯಿದೆಯನ್ನು ಕಠಿಣವಾಗಿ ಅನುಷ್ಠಾನ ಮಾಡಲು ವಿಶೇಷ ಲವ್ ಜಿಹಾದ್ ವಿರೋಧಿ ಪೊಲೀಸ್ ದಳ ವನ್ನು ಸ್ಥಾಪನೆ ಮಾಡಬೇಕೆಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಸೇರಿದಂತೆ ಅನೇಕ ಹಿಂದೂ ಸಂಘಟನೆಗಳು ಒಟ್ಟಾಗಿ ಈಗಾಗಲೇ ಇಂದು ಹೊನ್ನಾವರ ಮತ್ತು ಕುಮಟಾದ ಶಾಸಕರಾದ ಶ್ರೀ. ದಿನಕರ್ ಶೆಟ್ಟಿ ಇವರಿಗೆ ಮನವಿ ನೀಡಲಾಗಿದ್ದು, ಇದೇ ಡಿಸೆಂಬರ್ 11 ರಿಂದ 18 ರ ವರೆಗೆ ಬೆಂಗಳೂರು, ಮಂಗಳೂರು, ಶಿವಮೊಗ್ಗ, ಬೆಳಗಾವಿ, ವಿಜಯಪುರ, ಉಡುಪಿ ಸೇರಿದಂತೆ ರಾಜ್ಯದ ಸುಮಾರು 15 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಆಂದೋಲನದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಿದ್ದೇವೆ.

ಜಾಹೀರಾತು

ದೆಹಲಿಯ ಜಿಹಾದಿ ಅಫ್ತಾಬ್ ಹಿಂದೂ ಯುವತಿ ಶ್ರದ್ಧಾ ವಾಲ್ಕರ್‌ಳನ್ನು ಲವ್ ಜಿಹಾದ್ ಪ್ರಕರಣದಲ್ಲಿ 35 ತುಂಡುಗಳಾಗಿ ಕತ್ತರಿಸಿದ ಘಟನೆಯ ನಂತರ ದೇಶಾದ್ಯಂತ ಲವ್ ಜಿಹಾದ್ ವಿರುದ್ಧ ತೀವ್ರ ಆಕ್ರೋಶದ ಅಲೆ ಹಬ್ಬಿದೆ. ಕರ್ನಾಟಕದಲ್ಲೂ ಸಹ ಲವ್ ಜಿಹಾದ್ ಘಟನೆಗಳು ಹೆಚ್ಚಾಗಿದೆ. ಮಾರ್ಚ್ 2022 ರಂದು ಗದಗದಲ್ಲಿ ಅಪೂರ್ವ ಯುವತಿಯನ್ನು ಮಹಮ್ಮದ್ ಇಜಾಜ್‌ನು ಇಸ್ಲಾಮ್‌ಗೆ ಮತಾಂತರ ಮಾಡಿ, ಆಕೆಯ ಮೇಲೆ 25 ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಲು ಪ್ರಯತ್ನಿಸಿದ್ದನು. ಜನವರಿ 2022 ರಂದು ಮಂಗಳೂರಿನಲ್ಲಿ ದೀಪ್ತಿ ಮರ್ಲಾ ಎನ್ನುವ ಕೊಡಗಿನ ದಂತ ವೈದ್ಯಕೀಯ ವಿಧ್ಯಾರ್ಥಿನಿಯು ಅಬ್ದುಲ್ ರೆಹಮಾನ್ ಮದುವೆಯಾಗಿ ಆಕೆಯನ್ನು ಇಸ್ಲಾಮ್‌ಗೆ ಮತಾಂತರ ಮಾಡಿ, ಆಕೆಯನ್ನು ಐಸಿಸ್ ಭಯೋತ್ಪಾಧನಾ ಚಟುವಟಿಕೆಯಲ್ಲಿ ತೊಡಗಿಸಿದಾಗ ಆಕೆಯನ್ನು ರಾಷ್ಟ್ರೀಯ ತನಿಖಾ ದಳವು ಬಂಧಿಸಿದೆ. ಅಕ್ಟೋಬರ್ 2022 ರಂದು ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಶಿವಮೊಗ್ಗದಲ್ಲಿ ಶಾಹಿನ್ ಗ್ಯಾಂಗ್ ಎನ್ನುವ ಮುಸ್ಲಿಂ ಯುವತಿಯರ ಗುಂಪು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಡಿಯಲ್ಲಿ ತರಬೇತಿ ಪಡೆದು ಕಾಲೇಜುಗಳಲ್ಲಿ ಹಿಂದೂ ಯುವತಿಯರನ್ನು ಮುಸಲ್ಮಾನ್ ಯುವಕರಿಗೆ ಪರಿಚಯಿಸಿ ಲವ್ ಜಿಹಾದ್‌ನಲ್ಲಿ ಸಿಲುಕಿಸಿ ಅವರನ್ನು ಇಸ್ಲಾಂಗೆ ಮತಾಂತರ ಮಾಡುವ ಪ್ರಕರಣಗಳು ನಡೆಯುತ್ತಿರುವ ಬಗ್ಗೆ ರಾಷ್ಟ್ರೀಯ ತನಿಖಾ ದಳ ತನಿಖಾ ವರದಿಯಲ್ಲಿ ತಿಳಿಸಿದೆ. ಕರ್ನಾಟಕದಲ್ಲಿ 2014 ರಿಂದ 2019 ರ ವರೆಗೆ 21000 ಯುವತಿಯರು ನಾಪತ್ತೆಯಾಗಿದ್ದಾರೆ. ಈ ಎಲ್ಲ ಗಂಭೀರ ಘಟನೆಗಳನ್ನು ಗಮನಕ್ಕೆ ತಗೆದುಕೊಂಡು ಸರಕಾರವು ರಾಜ್ಯದಿಂದ ಮಹಿಳೆಯರು ಮತ್ತು ಹುಡುಗಿಯರ ನಾಪತ್ತೆಯ ಹಿಂದೆ ಏನಾದರೂ ಪಿತೂರಿ ಇದೆಯೇ ಅಥವಾ ಅದರ ಹಿಂದೆ ಯಾವುದಾದರೂ ಲವ್ ಜಿಹಾದ್’ ಇದೆಯೇ ಎಂದು ತನಿಖೆ ಮಾಡಲು ಗೃಹ ಕಚೇರಿ ಸ್ವತಂತ್ರ ತಂಡವನ್ನು ನೇಮಿಸಬೇಕು, ಲವ್ ಜಿಹಾದ್’ ಪ್ರಕರಣಗಳ ತನಿಖೆ ನಡೆಸಲು ಉತ್ತರ ಪ್ರದೇಶದ ಮಾದರಿಯಲ್ಲಿ ಪೊಲೀಸ್ ವಿಶೇಷ ಶಾಖೆಯನ್ನು ಸ್ಥಾಪಿಸಬೇಕು. ಇಂತಹ ಪ್ರಕರಣಗಳಲ್ಲಿ ‘ಲವ್ ಜಿಹಾದ್’ ಹೆಸರಿನಲ್ಲಿ ಅಪರಾಧಗಳನ್ನು ದಾಖಲಿಸಬೇಕು. ಎಂದು ಹಿಂದೂ ಜನಜಾಗೃತಿ ಸಮಿತಿಯ ಪ್ರಕಟಣೆಯಲ್ಲಿ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು