




ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ನೆಕ್ಕರೆಯಲ್ಲಿ ಸುಮಾರು 1951ರಿಂದ 40ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದಾರೆ. ಅರಣ್ಯ ಇಲಾಖೆಗೆ ಸಂಬಂಧಪಟ್ಟ ಗೊಂದಲಗಳಿಂದ ಇಲ್ಲಿವರೆಗೆ ಈ ಕುಟುಂಬಗಳಿಗೆ ತಮ್ಮ ಜಮೀನಿನ ಯಾವುದೇ ದಾಖಲಾತಿ ಆಗಿರಲಿಲ್ಲ ಹಾಗಾಗಿ ಸರಕಾರದ ಯಾವುದೇ ಯೋಜನೆಯ ಪ್ರಯೋಜನವನ್ನು ಇವರು ಪಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಕಳೆದ ಚುನಾವಣಾ ಸಂರ‍್ಭ ಈ ಪ್ರದೇಶದಲ್ಲಿ ಮತ ಕೇಳಲು ಬಂದಾಗ ಊರಿನವರ ಒಕ್ಕೊರಲ ಬೇಡಿಕೆ ಜಮೀನಿನ ಹಕ್ಕುಪತ್ರದಾಗಿತ್ತು, ಈ ನಿಟ್ಟಿನಲ್ಲಿ ಚುನಾವಣೆ ಕಳೆದ ತಕ್ಷಣ ಅವರಿಗೆ ಸಂಬಂಧಪಟ್ಟ ಭೂ ದಾಖಲೆಗಳನ್ನು ಸಂಗ್ರಹಿಸಿ ಅಗತ್ಯವಿದ್ದ ಕಾನೂನು ನೆರವನ್ನು ಪಡೆದು, ಇಲಾಖೆಗಳ ಅಧಿಕಾರಿಗಳ ಸಹಕಾರ ಪಡೆದು ನುಡಿದಂತೆ ನೆಕ್ಕರೆಯ ನನ್ನ ಬಂಧುಗಳಿಗೆ ಜಮೀನಿನ ಹಕ್ಕು ಪತ್ರವನ್ನು ವಿತರಿಸಿದ್ದು ನನಗೆ ಅತೀವ ಸಂತೋಷವಾಗಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾತನಾಡಿದ್ರು.














