Recent Posts

Thursday, September 17, 2026
ಸುದ್ದಿ

ಬಂಟ್ವಾಳ: ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದ ಯುವತಿಗೆ ಸಂಬಂಧಿಯಿಂದಲೇ ಲೈಂಗಿಕ ಕಿರುಕುಳ – ಕಹಳೆ ನ್ಯೂಸ್

ಬಂಟ್ವಾಳ: ಸಂಬಂಧಿಕರ ಮನೆಯಲ್ಲಿ ತಮ್ಮನೊಂದಿಗೆ ಆಶ್ರಯ ಪಡೆದಿದ್ದ ಯುವತಿಯೊಬ್ಬಳಿಗೆ ಅದೇ ಮನೆಯ ಸಂಬಂಧಿಕನೋರ್ವ ಲೈಂಗಿಕ ಕಿರುಕುಳ ನೀಡಿದ ಘಟನೆ ಅಲ್ಲಿಪಾದೆಯಲ್ಲಿ ತಡವಾಗಿ ಬೆಳಕಿಗೆ ಬಂದಿದ್ದು, ಸಂತ್ರಸ್ತ ಯುವತಿ ಹಾಗೂ ಆಕೆಯ ತಮ್ಮನನ್ನು ಆ.19ರಂದು ಪುನರ್‌ ವಸತಿ ಕೇಂದ್ರಕ್ಕೆ ದಾಖಲಿಸಲಾಗಿದೆ.

ಜಾಹೀರಾತು

ಯುವತಿ ಹಾಗೂ ಆಕೆಯ ತಮ್ಮ ಅಜ್ಜಿಯ ಜತೆ ವಾಸವಿದ್ದು, ಅಜ್ಜಿಯ ನಿಧನದ ಬಳಿಕ ಆರೋಪಿ ಸಂಬಂಧಿಯ ಮನೆಯಲ್ಲಿ ವಾಸವಿದ್ದರು. ಆರೋಪಿಯು ಯುವತಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದು, ಆದರೆ ಆಕೆಯ ಆರೋಗ್ಯದಲ್ಲಿ ಕೊಂಚ ನ್ಯೂನ್ಯತೆ ಇದ್ದ ಹಿನ್ನೆಲೆಯಲ್ಲಿ ಈ ವಿಚಾರವನ್ನು ತಿಳಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ಬಳಿಕ ಅಧಿಕಾರಿಗಳ ವಿಚಾರಣೆಯಿಂದ ಈ ಎಲ್ಲ ವಿಚಾರಗಳು ತಿಳಿದುಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಘಟನೆಯ ಕುರಿತು ಮಾಹಿತಿ ತಿಳಿದ ಸರಪಾಡಿ ಗ್ರಾ.ಪಂ. ಕಾವಲು ಸಮಿತಿಯವರು ಹಾಗೂ ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯವರು ಇಬ್ಬರ ರಕ್ಷಣ ಕಾರ್ಯವನ್ನು ನಿರ್ವಹಿಸಿದ್ದಾರೆ. ಬಂಟ್ವಾಳ ಸಿಡಿಪಿಒ ಗಾಯತ್ರಿ ಬಾಯಿ ಎಚ್‌. ಅವರ ಮಾರ್ಗದರ್ಶನದಲ್ಲಿ ಮೇಲ್ವಿಚಾರಕಿ ಶೋಭಾ ಅವರು ಸಂತ್ರಸ್ತ ಯುವತಿಯನ್ನು ಮಂಗಳೂರು ಜಪ್ಪಿನಮೊಗರಿನ ಸ್ವಾಧರ ಕೇಂದ್ರ ಹಾಗೂ ಆಕೆಯ ತಮ್ಮ ಬಾಲಕನನ್ನು ಬೋಂದೆಲ್‌ನ ಬಾಲಕರ ಬಾಲಮಂದಿರಕ್ಕೆ ಸೇರಿಸಲಾಗಿದೆ ಎಂದು ಸಿಡಿಪಿಒ ಕಚೇರಿ ಮಾಹಿತಿ ನೀಡಿದೆ.