Friday, March 13, 2026
ದಕ್ಷಿಣ ಕನ್ನಡಸುದ್ದಿ

ಜ್ಯೂಸರ್ ನಲ್ಲಿ ಅಡಗಿಸಿಟ್ಟು ಅಕ್ರಮ ಚಿನ್ನ ಸಾಗಾಟ : ಆರೋಪಿ ವಶ –ಕಹಳೆ ನ್ಯೂಸ್

ಮಂಗಳೂರು: ಜ್ಯೂಸರ್ ನಲ್ಲಿ ಅಡಗಿಸಿಟ್ಟು ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿರುವ ಘಟನೆ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಕೇರಳದ ಕಾಸರಗೋಡು ಮೂಲದ ಪ್ರಯಾಣಿಕ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ. ಈತ ದುಬೈನಿಂದ ಭಾನುವಾರ ತಡ ರಾತ್ರಿ ಹೊರಟು ಏ.18 ರ ಸೋಮವಾರ ಮಂಗಳೂರು ತಲುಪಿದ್ದ. ಈ ವೇಳೆ ಅಧಿಕಾರಿಗಳು ತಪಾಸಣೆ ನಡೆಸಿದಾಗ, ಜ್ಯೂಸರ್ ನಲ್ಲಿ ಅಡಗಿಸಿಡಲಾಗಿದ್ದ ಚಿನ್ನ ಪತ್ತೆಯಾಗಿದೆ. ಬಂಧಿತನಿಂದ ಒಟ್ಟು 199 ಗ್ರಾಂ ಚಿನ್ನವನ್ನು ವಶಪಡಿಕೊಳ್ಳಲಾಗಿದ್ದು, ಇದರ ಮೌಲ್ಯ 10,62,660ರೂ. ಎಂದು ಅಂದಾಜಿಸಲಾಗಿದೆ. ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು