Monday, March 9, 2026
ಕ್ರೀಡೆ

ಐಪಿಎಲ್ ನಲ್ಲಿ ಮಿಂಚಿದ ತುಳುನಾಡಿನ ಕುವರ ಕೆ.ಎಲ್. ರಾಹುಲ್ ಗೆ ಮಂಗಳೂರಿನಲ್ಲಿ ಭರ್ಜರಿ ಸ್ವಾಗತ – ಕಹಳೆ ನ್ಯೂಸ್

ಮಂಗಳೂರು : ಪ್ರಖ್ಯಾತ ಕ್ರಿಕೆಟ್ ಆಟಗಾರ ಕೆ.ಎಲ್ ರಾಹುಲ್ ಅವರನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಂಗಳೂರು ಸೆಂಟರ್ ವತಿಯಿಂದ ಸನ್ಮಾನಿಸಲಾಯಿತು.

ಬ್ಯಾಂಕಿನ ಡಿಜಿಎಂ ಸುಕುಮಾರ್ ಕೆ.ವಿ ಕ್ರಿಕೆಟ್ ಆಟಗಾರ ರಾಹುಲ್ ಅವರಿಗೆ ಶಾಲು ಹೊದಿಸಿ, ಫಲಪುಷ್ಪ ವಿತರಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು. ಮಾತ್ರವಲ್ಲ ರಾಹುಲ್ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಕ್ರೀಡಾ ಕ್ಷೇತ್ರದಲ್ಲಿ ಮತ್ತಷ್ಟೂ ಸಾಧನೆ ನಿಮ್ಮಿಂದ ಸಾಧ್ಯವಾಗಲಿ ಎಂದು ಶುಭ ಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಹುಲ್, ಮಂಗಳೂರಿನ ಜನತೆಗೆ ವಂದನೆ ಸಲ್ಲಿಸುತ್ತೇನೆ. ನಿಮ್ಮ ಪ್ರೀತಿ, ಪ್ರೋತ್ಸಾಹ ನನ್ನ ಸಾಧನೆಗೆ ಕಾರಣ. ನಿಮ್ಮ ಹಾರೈಕೆ ಮುಂದಿನ ದಿನಗಳಲ್ಲಿಯೂ ನನ್ನ ಮೇಲಿರಲಿ. ಇವತ್ತು ನಾನು ಸ್ವೀಕರಿಸುತ್ತಿರುವ ಸನ್ಮಾನಕ್ಕೆ ನಿಮ್ಮ ಪ್ರೀತಿಯೇ ಕಾರಣ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.

ಈ ವೇಳೆ ರಾಹುಲ್ ಅವರ ತಂದೆ ಪ್ರೋ. ಕೆ.ಎಲ್ ಲೊಕೇಶ್, ಬ್ಯಾಂಕಿನ ಪ್ರಾಂತೀಯ ವ್ಯವಸ್ಥಾಪಕರಾದ ಕಿಶೋರ್ ಕುಮಾರ್ ಮತ್ತು ಯತೀಶ್ ಬೈಕಂಪಾಡಿ ಉಪಸ್ಥಿತರಿದ್ದರು. ಇದೇ ವೇಳೆ ಹೆಸರಾಂತ ಚಿತ್ರ ಕಲಾವಿದೆ ಶಬರಿ ಗಾಣಿಗ, ರಾಹುಲ್ ಚಿತ್ರವನ್ನು ಕ್ಷಣ ಮಾತ್ರದಲ್ಲಿ ಸ್ಥಳದಲ್ಲಿ ಬಿಡಿಸಿ ಪ್ರಶಂಸೆಗೆ ಪಾತ್ರರಾದರು.

ಕರಾವಳಿಗೆ ಆಗಮಿಸಿದ ಖ್ಯಾತ ಆಟಗಾರನಿಗೆ ಸಂಪ್ರದಾಯದಂತೆ ಆರತಿ ಎತ್ತಿ ಸ್ವಾಗತಿಸಿದ್ದು ಗಮನಸೆಳೆದಿದೆ.