Sunday, June 14, 2026
ರಾಷ್ಟ್ರೀಯಸಿನಿಮಾಸುದ್ದಿ

‘ಮಹಿಳೆಯರು ತಮಗಿಂತ ಕಿರಿಯ ಪುರುಷರನ್ನು ವಿವಾಹವಾಗುತ್ತಿರುವ ವಿಚಾರ ಸಂತಸ ಇದೆ’ ; ಬಾಲಿವುಡ್‌ ನಟಿ ಕಂಗನಾ ರಣಾವತ್‌ – ಕಹಳೆ ನ್ಯೂಸ್

ಮುಂಬೈ, ಡಿ.09 : “ಯಶಸ್ವಿ ಮಹಿಳೆಯರು ತಮಗಿಂತ ಕಿರಿಯ ವಯಸ್ಸಿನ ಪುರುಷರನ್ನು ವಿವಾಹವಾಗುತ್ತಿರುವ ವಿಚಾರ ನನಗೆ ಸಂತಸ ತಂದಿದೆ” ಎಂದು ಬಾಲಿವುಡ್‌ ನಟಿ ಕಂಗನಾ ರಣಾವತ್‌ ತಿಳಿಸಿದ್ದಾರೆ.

ಜಾಹೀರಾತು

ಬಾಲಿವುಡ್‌ ತಾರೆಗಳಾದ ಕತ್ರಿನಾ ಕೈಫ್‌ (38) ಹಾಗೂ ವಿಕ್ಕಿ ಕೌಶಲ್‌ (33) ವಿವಾಹ ಸಮಾರಂಭವು ರಾಜಸ್ಥಾನದಲ್ಲಿ ನಡೆಯುತ್ತಿದೆ. ಈ ಮಧ್ಯೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಕಂಗನಾ, “ಸಿನಿಮಾ ಉದ್ಯಮದ ಯಶಸ್ವಿ ಮಹಿಳೆಯರು ತಮಗಿಂತ ಚಿಕ್ಕ ವಯಸ್ಸಿನ ಪುರುಷರನ್ನು ವಿವಾಹವಾಗುವ ಮೂಲಕ ತಮ್ಮ ಸಂಪ್ರದಾಯವನ್ನು ಮುರಿಯುತ್ತಿದ್ದಾರೆ. ಈ ಬೆಳವಣಿಗೆಯನ್ನು ನೋಡಲು ಸಂತಸವಾಗುತ್ತಿದೆ” ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

“ಕಿರಿಯ ವಯಸ್ಸಿನ ಮಹಿಳೆಯರನ್ನು ಶ್ರೀಮಂತ ಪುರುಷರು ವಿವಾಹವಾಗಿರುವ ಬಗ್ಗೆ ನಾವು ಕೇಳುತ್ತಲೇ ಬೆಳೆದಿದ್ದೇವೆ. ನಿರ್ದಿಷ್ಟ ವಯಸ್ಸಿನ ಬಳಿಕ ಮಹಿಳೆಯರಿಗೆ ವಿವಾಹ ಅಸಾಧ್ಯವಾಗಿತ್ತು. ಈ ಸಂಪ್ರದಾಯವನ್ನು ಭಾರತೀಯ ಚಿತ್ರೋದ್ಯಮದ ಪ್ರಮುಖ ಮಹಿಳೆಯರು ಮುರಿಯುತ್ತಿದ್ದಾರೆ” ಎಂದು ಹೇಳಿದ್ಧಾರೆ.

ಐಶ್ವರ್ಯಾ ರೈ, ಪ್ರಿಯಾಂಕಾ ಚೋಪ್ರಾ ಅವರು ತಮಗಿಂತ ಕಿರಿಯ ವಯಸ್ಸಿನ ಪುರುಷರನ್ನು ವಿವಾಹವಾಗಿರುವುದನ್ನು ಸ್ಮರಿಸಬಹುದು.