Recent Posts

Wednesday, September 16, 2026
ಸುದ್ದಿ

ಮಹಿಳೆಯರಿಗೆ ಸುರಕ್ಷತೆಗೆ ಟಾಸ್ಕ್ ಫೋರ್ಸ್ ರಚಿಸುವ ಬಗ್ಗೆ ದುರ್ಗಾವಾಹಿನಿ ಮಂಗಳೂರು ವತಿಯಿಂದ ಪೊಲೀಸ್ ಆಯುಕ್ತರಿಗೆ ಮನವಿ – ಕಹಳೆ ನ್ಯೂಸ್

ಮಂಗಳೂರು: ಕಳೆದ ಕೆಲವು ತಿಂಗಳುಗಳಿ0ದ ಕೆಲಸ ಬಿಟ್ಟು ಮನೆಗೆ ಹೋಗುವ ಮಹಿಳೆಯರ ಮೈಮೇಲಿನ ಚಿನ್ನದ ಆಭರಣಗಳನ್ನು ಕಸಿಯುವ ಕೆಲಸ, ಅಲ್ಲದೆ ಅವರ ಮೈಕೈ ಮುಟ್ಟಿ ಲೈಂಗಿಕ ಕಿರುಕುಳ ಕೊಡುವ ಕೆಲಸ, ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರ ಅಶ್ಲೀಲ ಫೋಟೋ, ವಿಡಿಯೋ ಹಾಕುವ ಕೃತ್ಯ, ಅಲ್ಲದೆ ಅಪ್ರಾಪ್ತ ಬಾಲಕಿಯರಿಗೆ ಫೋನ್ ಮೂಲಕ ಲೈಂಗಿಕ ಕಿರುಕುಳ ಹೆಚ್ಚಾಗುತ್ತಿದ್ದು ಇದನೆಲ್ಲ ತಾವುಗಳು ಪರಿಶೀಲಿಸಿ ನಿಮ್ಮ ನೇತೃತ್ವದಲ್ಲಿ ಮಹಿಳಾ ಸುರಕ್ಷತೆಗೆ ಒಂದು ಪಡೆಯನ್ನು (ಟಾಸ್ಕ್ ಫೋರ್ಸ್) ರಚಿಸಿ ಮಹಿಳೆಯರ ರಕ್ಷಣೆ ಮಾಡಬೇಕೆಂದು ದುರ್ಗಾವಾಹಿನಿ ಮಂಗಳೂರು ವತಿಯಿಂದ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಿಭಾಗ ಮಾತೃಶಕ್ತಿ ಪ್ರಮುಖ್ ಶ್ರೀಮತಿ ಸುರೇಖಾ ರಾಜ್, ಜಿಲ್ಲಾ ಮಾತೃಶಕ್ತಿ ಸಹಪ್ರಮುಖ್ ಶ್ರೀಮತಿ ನಯನ ತೇಜ್, ದುರ್ಗಾವಾಹಿನಿ ಜಿಲ್ಲಾ ಸಂಚಾಲಕಿ ಶ್ರೀಮತಿ ಶ್ವೇತಾ ಅದ್ಯಪಾಡಿ ಉಪಸ್ಥಿತಿತರಿದ್ದರು.

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು