Friday, April 24, 2026
ರಾಜಕೀಯ

ಮಠಂದೂರು ಗೆಲುವಿಗೆ ಬಿಜೆಪಿ ರಣಕಹಳೆ ; ಫಯರ್ ಬ್ರ್ಯಾಂಡ್ ಭಾಷಣಕಾರ ತೇಜಸ್ವಿ ಸೂರ್ಯ ಇಂದು ಪುತ್ತೂರಿಗೆ – ಕಹಳೆ ನ್ಯೂಸ್

ಪುತ್ತೂರು : ತೀವ್ರ ವಿರೋಧದ ನಡುವೆ ಸವಾಲಾಗಿ ಸ್ವೀಕರಿಸಿದ ಬಿ.ಜೆ.ಪಿ. ಸಂಜೀವ ಮಠಂದೂರು ಅವರನ್ನು ಗೆಲ್ಲಿಸಿಯೇ ಸಿದ್ಧ ಎಂದು ಪಣ ತೊಟ್ಟಿದೆ.

ಇಂದು ಸಂಜೀವ ಮಠಂದೂರು ನಾಮಪತ್ರ ಸಲ್ಲಿಸಲಿದ್ದು ಮುಖ್ಯ ಭಾಷಣಕಾರರಾಗಿ ಯುವಮೋರ್ಛಾದ ಪ್ರಧಾನ ಕಾರ್ಯದರ್ಶಿ ಫಯರ್ ಬ್ರ್ಯಾಂಡ್ ಭಾಷಣಕಾರ ತೇಜಸ್ವಿ ಸೂರ್ಯ ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು ವಿಧಾನಸಭಾ ಕ್ಷೇತ್ರದ ಭಾಜಪ ಅಭ್ಯರ್ಥಿಯಾಗಿ ಸಂಜೀವ ಮಠಂದೂರು ಇಂದು ಬೆಳಗ್ಗೆ 11:20 ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ .

ಇದರ ನಿಮಿತ್ತ ಬೆಳಿಗ್ಗೆ 9:00 ಕ್ಕೆ ಪುತ್ತೂರ ಒಡೆಯ ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ ಬಳಿಕ ಮೆರವಣಿಗೆಯ ಮೂಲಕ ತೆಂಕಿಲ ಸ್ವಾಮಿ ಕಲಾಮಂದಿರದಲ್ಲಿ ಬೃಹತ್ ಸಭೆ ನಡೆಯಲಿದೆ.