Recent Posts

Saturday, May 9, 2026
ಸುದ್ದಿ

ಮಂಗಳೂರು ವಿಶ್ವವಿದ್ಯಾನಿಲಯದ 39 ನೇ ಘಟಿಕೋತ್ಸವ -ಕಹಳೆ ನ್ಯೂಸ್

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ 39 ನೇ ಘಟಿಕೋತ್ಸವ ಏಪ್ರಿಲ್ 10 (ಶನಿವಾರ) ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದ್ದು, ಕೊರೋನಾ ಎರಡನೇ ಅಲೆಯ ಆತಂಕವಿರುವುದರಿಂದ ಕಾರ್ಯಕ್ರಮಕ್ಕೆ ಅರ್ಹ ವಿದ್ಯಾರ್ಥಿಗಳ ಹಾಜರಿಯನ್ನು ಮಿತಿಗೊಳಿಸಲು ತೀರ್ಮಾನಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮಾರ್ಚ್ 29 ರಂದು ಕುಲಪತಿಯವರ ಅಧ್ಯಕ್ಷತೆಯಲ್ಲಿ ವಿವಿಧ ನಿಕಾಯಗಳ ಡೀನ್ರು ಮತ್ತು ವಿಭಾಗ ಮುಖ್ಯಸ್ಥರ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಘಟಿಕೋತ್ಸವದಲ್ಲಿ ಪಿ ಹೆಚ್.ಡಿ ಪದವಿ ಪಡೆಯುವವರು, ರ‍್ಯಾಂಕ್ ವಿಜೇತರು ಹಾಗೂ ಚಿನ್ನದ ಪದಕ ಪಡೆಯಲು ಅರ್ಹರಾದ ವಿದ್ಯಾರ್ಥಿಗಳು ಮಾತ್ರವೇ ಹಾಜರಾಗಬಹುದಾಗಿದ್ದು, ಉಳಿದ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ಘಟಿಕೋತ್ಸವದ ಬಳಿಕ ಅಂಚೆಯ ಮೂಲಕ ಕಳುಹಿಸಿಕೊಡಲಾಗುವುದು.