Wednesday, March 11, 2026
ಪುತ್ತೂರು

ಕ್ಯಾಂಪ್ಕೋ ಉದ್ಯೋಗಿಗಳ ವಸತಿನಿಲಯದ ಸಭಾಂಗಣದಲ್ಲಿ ಕ್ಯಾಂಪ್ಕೋ ಎಂಪ್ಲಾಯಿಸ್ ರಿಕ್ರೀಯೇಷನ್ ಸೆಂಟರ್ ನ ವಾರ್ಷಿಕ ದಿನಾಚರಣೆ-ಕಹಳೆ ನ್ಯೂಸ್

ಪುತ್ತೂರು : ಕ್ಯಾಂಪ್ಕೋ ಎಂಪ್ಲಾಯಿಸ್ ರಿಕ್ರೀಯೇಷನ್ ಸೆಂಟರ್ ನ ವಾರ್ಷಿಕ ದಿನಾಚರಣೆಯು ಕ್ಯಾಂಪ್ಕೋ ಉದ್ಯೋಗಿಗಳ ವಸತಿನಿಲಯದ ಸಭಾಂಗಣದಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಯಾಂಪ್ಕೋ ಉಪಾಧ್ಯಕ್ಷರಾದ ಶ್ರೀ ಶಂಕರನಾರಾಯಣ ಭಟ್ ಖಂಡಿಗೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಶ್ರೀ ಕೃಷ್ಣಕುಮಾರ್ ಎಚ್.ಎಂ ವ್ಯವಸ್ಥಾಪಕ ನಿರ್ದೇಶಕರು (ಪ್ರಭಾರ) ಕ್ಯಾಂಪ್ಕೋ ನಿಯಮಿತ ಮಂಗಳೂರು, ಪದ್ಮರಾಜ್ ಪಟ್ಟಾಜೆ ನಿರ್ದೆಶಕರು ಕ್ಯಾಂಪ್ಕೋ ನಿಯಮಿತ ಮಂಗಳೂರು, ರಾಘವೇಂದ್ರ ಭಟ್ ಕ್ಯಾಂಪ್ಕೋ ನಿಯಮಿತ ಮಂಗಳೂರು, ಮಹೇಶ್ ಚೌಟ ನಿರ್ದೆಶಕರು ಕ್ಯಾಂಪ್ಕೋ ನಿಯಮಿತ ಮಂಗಳೂರು,ಶ್ರೀ ರಾಧಾಕೃಷ್ಣ ಭಟ್ ಅಧ್ಯಕ್ಷರು ಕ್ಯಾಂಪ್ಕೋ ಚಾಕಲೇಟು ಪ್ಯಾಕ್ಟರಿ ಎಂಪ್ಲಾಯಿಸ್ ಯೂನಿಯನ್ ಪುತ್ತೂರು, ಶ್ಯಾಮ್ ಪ್ರಸಾದ್ ಎಚ್ ಅಧ್ಯಕ್ಷರು ಕ್ಯಾಂಪ್ಕೋ ಎಂಪ್ಲಾಯಿಸ್ ರಿಕ್ರೀಯೇಷನ್ ಸೆಂಟರ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀ ಶಂಕರನಾರಾಯಣ ಭಟ್ ಖಂಡಿಗೆ ಹಾಗೂ ಮುಖ್ಯ ಅತಿಥಿಗಳು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು.

ಕ್ಯಾಂಪ್ಕೋ ಎಂಪ್ಲಾಯಿಸ್ ರಿಕ್ರೀಯೇಷನ್ ಸೆಂಟರ್ ನ ಅಧ್ಯಕ್ಷರಾದ ಶ್ಯಾಮ್ ಪ್ರಸಾದ್ ಎಚ್ ಸ್ವಾಗತ ಭಾಷಣ ಮಾಡಿದರು.

ರಿಕ್ರೀಯೇಷನ್ ಸೆಂಟರ್ ನ ಕಾರ್ಯದರ್ಶಿ ರಮೇಶ ರೈ ವಾರ್ಷಿಕ ವರದಿ ಮಂಡಿಸಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷರಾದ ಕ್ಯಾಂಪ್ಕೋ ಉಪಾಧ್ಯಕ್ಷರಾದ ಶ್ರೀ ಶಂಕರನಾರಾಯಣ ಭಟ್ ಖಂಡಿಗೆಯವರು ಮಾತನಾಡಿ ಇಲ್ಲಿ ದೇಶವನ್ನು ಬೆಳೆಸುವ ಶ್ರಮ ನಿಮ್ಮಿಂದ ಆಗುತ್ತಿದೆ, ವಿಶ್ವಕ್ಕೆ ಸಿಹಿಯನ್ನು ಹಂಚಲು ಈ ರೀತಿಯ ಕಾರ್ಯಕ್ರಮಗಳನ್ನು ಪ್ರತೀ ವರ್ಷವೂ ಹಮ್ಮಿಕೊಳ್ಳುತ್ತಿದ್ದೀರಿ, ನಿಮ್ಮ ಏಕತ್ತಾನತೆಯನ್ನು ಕಳಚಿ ಹೊಸ ಚೈತನ್ಯ, ಹೊಸ ಹುರುಪು ನಿಮ್ಮ ಪ್ರತಿ ಕ್ಷಣದ ಕೆಲಸಗಳಲ್ಲಿ ಮೂಡಿ ಬರಲು ಇಂತಹ ವಾರ್ಷಿಕ ಹಬ್ಬಗಳು ತುಂಬಾ ಅಗತ್ಯ ಎಂದರು.

ಕ್ಯಾಂಪ್ಕೋದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕೃಷ್ಣ ಕುಮಾರ್ ಎಚ್.ಎಂ ರವರು ಮಾತನಾಡಿ ಕ್ಯಾಂಪ್ಕೋ ವಸತಿ ನಿಲಯ ಒಂದು ಮಾದರಿ ವಸತಿ ನಿಲಯ ಆಗಬೇಕು.

ವಸತಿ ನಿಲಯದ ಸುತ್ತು ಮುತ್ತ ಹೂ, ಹಣ್ಣು , ತರಕಾರಿಗಳನ್ನು ಬೆಳೆಸಬೇಕು ಎಂದರು.

ಈ ವಾರ್ಷಿಕ ದಿನಾಚರಣೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಾಗು ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯಲ್ಲಿ ನಿವ್ರತ್ತಿ ಹೊಂದಿದವರನ್ನು ಸನ್ಮಾನಿಸಲಾಯಿತು.

ರಿಕ್ರೀಯೇಷನ್ ಸೆಂಟರ್ ನ ಉಪಾಧ್ಯಕ್ಷರಾದ ಸುಲತಾ ಸತೀಶ್ ಧನ್ಯವಾದ ಸಮರ್ಪಣೆ ಮಾಡಿದರು. ಸಭಾ ಕಾರ್ಯಕ್ರಮದ ನಂತರ ಭೋಜನ ವ್ಯವಸ್ಥೆ ಮಾಡಲಾಯಿತು.

ಭೋಜನದ ನಂತರ ಕ್ಯಾಂಪ್ಕೋ ಉದ್ಯೋಗಿಗಳ ಕುಟುಂಬದವರಿಂದ ವಿವಿದ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಿತು. ಖಾದರ್ ಮತ್ತು ಉಷಾಕಿರಣ್ ಕಾರ್ಯಕ್ರವನ್ನು ನಿರೂಪಣೆಯನ್ನು ಮಾಡಿದರು.