Recent Posts

Sunday, September 13, 2026
ಸುದ್ದಿ

ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ನಾಳೆ ಉನ್ನತ ಶಿಕ್ಷಣದಲ್ಲಿ ಮಹಿಳೆಯರ ಪಾತ್ರ ಎಂಬ ಕುರಿತು ವೆಬಿನಾರ್ –ಕಹಳೆ ನ್ಯೂಸ್

ಮಂಗಳೂರು : ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (ರಿ) ಮಂಗಳೂರು ವಿಶ್ವವಿದ್ಯಾನಿಲಯ ವಿಭಾಗವು ಮಾರ್ಚ್ 9 ರಂದು ಸಂಜೆ 6 ಗಂಟೆಗೆ ‘ಉನ್ನತ ಶಿಕ್ಷಣದಲ್ಲಿ ಮಹಿಳೆಯರ ಪಾತ್ರ’ ಎಂಬ ಕುರಿತು ವೆಬಿನಾರನ್ನು ಹಮ್ಮಿಕೊಂಡಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾನಿಲಯ, ವಿಜಯಪುರದ ಮಾಜಿ ಕುಲಪತಿಗಳು ಹಾಗೂ ಭಾರತೀಯ ಶಿಕ್ಷಣ ಮಂಡಲ, ನಾಗಪುರದ ಜೊತೆ ಕಾರ್ಯದರ್ಶಿ ಡಾ. ಮೀನಾ ಆರ್ ಚಂದಾವರ್ಕರ್ವರು ಉಪನ್ಯಾಸ ನೀಡಲಿದ್ದು, ದೆಹಲಿಯ ಸಾಹಿತ್ಯ ಅಕಾಡೆಮಿಯ ಸಲಹಾ ಸಮಿತಿ ಸದಸ್ಯೆ ಡಾ. ಗೀತಾ ಆರ್ ಶೆಣೈಮುಖ್ಯ ಅತಿಥಿಯಾಗಿರಲಿದ್ದಾರೆ. ಕರ್ನಾಟಕ ರಾಜ್ಯ ಮಹಾವಿದ್ಯಾಲಯದ ಮಹಿಳಾ ಪ್ರಮುಖರಾದ ವನಜಾ ಶ್ರೀರಾಮ್ ಅಧ್ಯಕ್ಷತೆ ವಹಿಸಿಕೊಂಡಿದ್ದು. ಕಾರ್ಯಕ್ರಮವುʼ KRMSSMUVibhagʼ ಯೂಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರವಾಗಲಿದೆ. ಆಸಕ್ತರು ಭಾಗವಹಿಸಬಹುದೆಂದು ಕಾರ್ಯಕ್ರಮದ ಸಂಯೋಜಕಿ ಕಾವ್ಯ ಪಿ ಹೆಗ್ಡೆ ತಿಳಿಸಿದ್ದಾರೆ