Thursday, March 19, 2026
ಹೆಚ್ಚಿನ ಸುದ್ದಿ

ಉಳ್ಳಾಲ : ಬೈಕ್ ಗೆ ಗುದ್ದಿ ಕೆಳಕ್ಕೆ ಬಿದ್ದ ಸವಾರರಿಗೆ ಚೂರಿ ಇರಿತ! – ಕಹಳೆ ನ್ಯೂಸ್

ಉಳ್ಳಾಲ: ತಡರಾತ್ರಿ ಬೈಕ್ ನಲ್ಲಿ ತೆರಳುತ್ತಿದ್ದ ಇಬ್ಬರು ಯುವಕರಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದ ಅಪರಿಚಿತ ತಂಡವೊಂದು, ಚೂರಿಯಲ್ಲಿ ಚುಚ್ಚಿ ಕೊಲೆಯತ್ನ ನಡೆಸಿದ ಘಟನೆ ಶುಕ್ರವಾರ ತಡರಾತ್ರಿ ಉಳ್ಳಾಲ ಠಾಣಾ ವ್ಯಾಪ್ತಿಯ ಕುತ್ತಾರು ಕೃಷ್ಣಕೋಡಿಯಲ್ಲಿ ನಡೆದಿದೆ.

ಸೇವಂತಿಗುಡ್ಡೆ ನಿವಾಸಿ ಆದಿತ್ಯ (23) ಮತ್ತು ಪಂಡಿತ್ ಹೌಸ್ ನಿವಾಸಿ ಪವನ್ (27) ಗಾಯಗೊಂಡವರು. ಚರ್ಚೊಂದರಲ್ಲಿ ಕ್ಯಾಟರಿಂಗ್ ನಲ್ಲಿ ಕೆಲಸಕ್ಕಿದ್ದ ಸಹೋದರನನ್ನು ಕರೆ ತರಲು ತೆರಳುವಾಗ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕೃಷ್ಣಕೋಡಿಯಲ್ಲಿ ಬಳಿ ಹಿಂಬದಿಯಿಂದ ಬಂದ ಅಪರಿಚಿತ ಬೈಕ್ ಆದಿತ್ಯ ಮತ್ತು ಪವನ್ ಇದ್ದ ಬೈಕ್ ಗೆ ಗುದ್ದಿದೆ. ಈ ವೇಳೆ ಇಬ್ಬರು ರಸ್ತೆಗೆಸೆಯಲ್ಪಟ್ಟಿದ್ದಾರೆ. ಆ ಬಳಿಕ ಇಬ್ಬರಿಗೂ ಚೂರಿಯಿಂದ ಇರಿದ ಆಗಂತುಕರು ಸ್ಥಳದಿಂದ ಪರಾರಿಯಾಗಿದ್ದಾರೆ. ಇದೇ ಸ್ಥಳದಲ್ಲಿ ಈ ಹಿಂದೆಯೂ ಆರ್ ಎಸ್ ಎಸ್ ಮುಖಂಡನ ಹತ್ಯೆ ಯತ್ನ ನಡೆದಿತ್ತು. ಗಾಯಗೊಂಡಿರುವ ಇಬ್ಬರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು