Wednesday, June 10, 2026
ಸುದ್ದಿ

ಮಂಗಳೂರು: ಕಾಲಿಗೆ ಸರಪಳಿ ಕಟ್ಟಿ ಈಜಿದ ಬಂಟ್ವಾಳದ ಕಲ್ಮಂಜ ಸರ್ಕಾರಿ ಶಾಲೆಯ ಶಿಕ್ಷಕ – ಕಹಳೆ ನ್ಯೂಸ್

ಬಂಟ್ವಾಳದ ಕಲ್ಮಂಜ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ನಾಗರಾಜ ಖಾರ್ವಿ ಕಂಚುಗೋಡು ಅವರು ಶುಕ್ರವಾರ ಬೆಳಿಗ್ಗೆ ನಗರದ ತಣ್ಣೀರು ಬಾವಿ ಬಳಿ ಅರಬ್ಬಿ ಸಮುದ್ರದಲ್ಲಿ ಒಂದು ಕಿ.ಮೀ. ದೂರ ಪದ್ಮಾಸನ ಹಾಕಿ, ಕಾಲಿಗೆ ಸರಪಳಿ ಬಿಗಿದು ಬ್ರೆಸ್ಟ್ ಸ್ಟ್ರೋಕ್ನಲ್ಲಿ ಈಜಿ, ದಾಖಲೆ ಬರೆದರು.

ಜಾಹೀರಾತು

ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಹಾಗೂ ಈಜು ಮತ್ತು ಯೋಗದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಅವರು ಅರಬ್ಬಿ ಸಮುದ್ರದಲ್ಲಿ ಒಂದು ಕಿ.ಮೀ. ದೂರವನ್ನು ಪದ್ಮಾಸನ ಹಾಕಿ ಕ್ರಮಿಸಿದರು. ಬೆಳಿಗ್ಗೆಯೆ ಸಾಧನೆಗೆ ಮುಂದಾದ ನಾಗರಾಜ ಖಾರ್ವಿ‌ ಅವರನ್ನು ಸ್ನೇಹಿತರು, ಸಂಬಂಧಿಗಳು ಸನ್ಮಾನಿಸಿ, ಪ್ರೋತ್ಸಾಹಿಸಿದರು. ಈ ಸಂದರ್ಭದಲ್ಲಿ ಹಲವಾರು ಜನರು ಸಮುದ್ರ ದಡದಲ್ಲಿ ನಿಂತು‌ ಈಜುವುದನ್ನು‌ ಕುತೂಹಲದಿಂದ ವೀಕ್ಷಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು