Wednesday, June 10, 2026
ಸುದ್ದಿ

ಮಂಗಳೂರಿಗೆ ತಟ್ಟದ ಸಾರಿಗೆ ನೌಕರರ ಬಂದ್ ಬಿಸಿ :ಎಂದಿನಂತೆ ಬಸ್ ಸಂಚಾರ – ಕಹಳೆ ನ್ಯೂಸ್

ಮಂಗಳೂರು : ಸಾರಿಗೆ ನೌಕರರನ್ನು ಸರಕಾರಿ‌ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದರೂ ಶನಿವಾರ ಬೆಳಗ್ಗಿನಿಂದ ಮಂಗಳೂರು ಕೆಎಸ್ಸಾರ್ಟಿಸಿ‌ ವಿಭಾಗದಿಂದ ವಿವಿಧ ಕಡೆಗಳಿಗೆ ಎಂದಿನಂತೆ ಬಸ್ ಕಾರ್ಯಾಚರಣೆ ನಡೆಸಿದೆ.

ಜಾಹೀರಾತು

ಶನಿವಾರ ಬೆಳಗ್ಗೆ 8 ಗಂಟೆಯವರೆಗೆ ಮಂಗಳೂರು ವಿಭಾಗದಿಂದ 87 ಬಸ್ಗಗಳು‌ ವಿವಿಧ ಕಡೆಗಳಿಗೆ ಸಂಚರಿಸಿದೆ. ಬೆಂಗಳೂರು, ಮೈಸೂರು, ದಾವಣಗೆರೆ ಸೇರಿದಂತೆ ದೂರದ ಊರುಗಳಿಂದ ಮಂಗಳೂರಿಗೆ ಆಗಮಿಸುವ ಬಸ್ ಸಂಚಾರದಲ್ಲಿ ವ್ಯತ್ಯಯವಾಗಿದೆ. ಮಂಗಳೂರು ಬಸ್ ಸಂಚಾರದಲ್ಲಿ ಈವರೆಗೆ ಯಾವುದೇ ವ್ಯತ್ಯಯ ಉಂಟಾಗಲಿಲ್ಲ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು