
ಕಹಳೆ ನ್ಯೂಸ್ : ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ಹೆಸರು ಮಾಡಿರುವ ನಟಿಗೆ ಪ್ರಧಾನಿ ನರೇಂದ್ರ ಮೋದಿ ಪತ್ರವೊಂದನ್ನು ಬರೆದಿದ್ದಾರೆ. ಮಾರ್ಚ್ 7ರಂದು ಮೋದಿ ಪತ್ರ ಬರೆದಿದ್ದು, ಕೇಂದ್ರ ಸರ್ಕಾರದ ‘ಬೇಟಿ ಬಚಾವೋ, ಬೇಟಿ ಪಡಾವೋ’ ಹಾಗೂ ನ್ಯಾಶನಲ್ ನ್ಯೂಟ್ರಿಶನ್ ಮಿಷನ್ ಯೋಜನೆಗಳ ಯಶಸ್ಸಿಗೆ ಸಹಕರಿಸುವಂತೆ ಕೋರಿದ್ದಾರೆ.

ಆ ನಟಿ ಯಾರು ?
ಅವಳೇ ಕಂಡ್ರೀ ಹಾಟ್ ಬೆಡಗಿ ಕಾಜಲ್ ಅಗರ್ವಾಲ್ !!

ಮೋದಿ ಬರೆದ ಪತ್ರವನ್ನು ಕಾಜಲ್ ಅಗರ್ವಾಲ್ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ. ಮಹಿಳಾ ದಿನಕ್ಕೆ ಶುಭ ಕೋರಿದ ಪ್ರಧಾನಿಗೆ ಧನ್ಯವಾದ ಹೇಳಿದ್ದಾರೆ. ಅಷ್ಟೇ ಅಲ್ಲ ಮಹಿಳಾ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಕೈಗೊಂಡಿರುವ ಯೋಜನೆಗಳನ್ನು ಮೆಚ್ಚಿಕೊಂಡಿರುವ ನಟಿ, ತಾವು ಕೂಡ ಬೆಂಬಲ ನೀಡುವುದಾಗಿ ಪ್ರತಿಕ್ರಿಯಿಸಿದ್ದಾರೆ.
Dear Mr. Prime minister, @narendramodi
Thank you for your very informative letter and the lovely women's day wishes! I really appreciate the effective movements like BBBP and NNM and pledge my support in every way possible for the empowerment of women.— Kajal Aggarwal (@MsKajalAggarwal) March 15, 2018
ಮಾರ್ಚ್ 8ರಂದು ಮಹಿಳಾ ದಿನಾಚರಣೆ ನಿಮಿತ್ತ ಪ್ರಧಾನಿ ಮೋದಿ ನ್ಯಾಶನಲ್ ನ್ಯೂಟ್ರಿಶನ್ ಮಿಷನ್ ಯೋಚನೆಗೆ ಚಾಲನೆ ನೀಡಿದ್ದರು. ಇನ್ನು ನಟಿ ಕಾಜಲ್ ಅಗರ್ವಾಲ್ ಸದ್ಯ ಕ್ವೀನ್ ಚಿತ್ರದ ತಮಿಳು ರಿಮೇಕ್ ‘ಪ್ಯಾರಿಸ್ ಪ್ಯಾರಿಸ್’ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.
ಪ್ರಧಾನಮಂತ್ರಿಗಳು ಬರೆದ ಪತ್ರ :












