ಬಲ್ನಾಡ್ ;ತನ್ನ ಸ್ವಂತ ಖರ್ಚಿನಿಂದಲೇ ಗಾಳಿಗೆ ಹಾರಿಹೋದ ಮನೆಯ ಚಾವಣಿ ಸರಿಪಡಿಸಿದ ಕೌನ್ಸಿಲರ್ ಪೂರ್ಣಿಮಾ-ಕಹಳೆ ನ್ಯೂಸ್

ಬಲ್ನಾಡು ಗ್ರಾಮ ಜನತಾ ಕಾಲೋನಿ ಯಲ್ಲಿ ಮಳೆ ಗಾಳಿಗೆ ವಿಜಯ ಆಚಾರ್ಯ ಅವರ ಮನೆಯ ಚಾವಣಿ ಹಾರಿಹೋಗಿತ್ತು,

ಸದ್ಯ ಕೊರೊನದಿಂದ ಕೆಲಸ ಇಲ್ಲದೆ ತೀರಾ ಕಷ್ಟದಲ್ಲಿ ಇದ್ದ ಕುಟುಂಬ, ಅಲ್ಲದೆ ಮನೆಯಲ್ಲಿ ಮಗ ಅಂಗವಿಕಲತೆ ಯಿಂದ ಬಳಲುತ್ತಿದ್ದು ಅವರ ಖರ್ಚಿಗೂ ಹಣ ಬೇಕಾಗಿದೆ.

ಎಲ್ಲಾ ಕಷ್ಟಗಳನ್ನೂ ಮನಗಂಡ ಕೌನ್ಸಿಲರ್ ಪೂರ್ಣಿಮಾಅವರು ಸ್ವತಃ ಮುಂದೆ ನಿಂತ್ತು ವಿಜಯ ಆಚಾರ್ಯ ಅವರ ಮನೆಯನ್ನು ತನ್ನ ಸ್ವಂತ ಖರ್ಚಿನಲ್ಲಿ ಸರಿಪಡಿಸಿ ಕೊಟ್ಟಿದ್ದಾರೆ.

ಸಾರ್ವಜನಿಕವಾಗಿ ಪೂರ್ಣಿಮಾಅವರ ಕಾರ್ಯ ಮೆಚ್ಚುಗೆ ವ್ಯಕ್ತವಾಗಿದೆ.















