Wednesday, June 10, 2026
ಸುದ್ದಿ

ಮಂಗಳೂರಿನಲ್ಲಿ ಮುಗಿಯದ ಫ್ಲೆಕ್ಸ್ ವಾರ್..!! ಮತ್ತೆ ಪಂಪ್ವೆಲ್ ಫ್ಲೈ ಓವರ್ ನಲ್ಲಿ “ಸಾವರ್ಕರ್” ಬ್ಯಾನರ್, ತೊಕ್ಕೊಟ್ಟು ಸೇತುವೆಗೆ “ಅಬ್ಬಕ್ಕ” ಹೆಸರು!! – ಕಹಳೆ ನ್ಯೂಸ್

ಮಂಗಳೂರು: ನಗರದಲ್ಲಿ ಮತ್ತೆ ಫ್ಲೈ ಓವರ್ ಗಳಿಗೆ ಹೆಸರಿಡುವ ಫ್ಲೆಕ್ಸ್ ವಾರ್ ಆರಂಭಗೊಂಡಿದೆ. ನಿನ್ನೆ ಪಂಪ್ ವೆಲ್ ಫ್ಲೈ ಓವರ್ ಗೆ ವೀರ ಸಾವರ್ಕರ್ ಹೆಸರಿನ ಫ್ಲೆಕ್ಸ್ ಹಾಕಿ ಕೆಲವೇ ಕ್ಷಣಗಳಲ್ಲಿ ಕಿತ್ತು ಹಾಕಲಾಗಿದ್ದರೆ ಇಂದು ಮತ್ತೆ ಅದೇ ಸ್ಥಳದಲ್ಲಿ ಹೊಸ ಫ್ಲೆಕ್ಸ್ ಹಾಗೂ ಭಜರಂಗದಳ ಸಂಘಟನೆ ಹೆಸರು ಬರೆಯಲಾಗಿದೆ.

ಜಾಹೀರಾತು

ತೊಕ್ಕೊಟ್ಟು ಫ್ಲೈ ಓವರ್ ಗೆ ವೀರ ರಾಣಿ ಅಬ್ಬಕ್ಕ ಸೇತುವೆ ಎಂದು ಬರೆಯಲಾಗಿದೆ. ಇನ್ನು ನಗರದ ಕೇಂದ್ರ ಮೈದಾನಕ್ಕೆ ಕೋಟಿ ಚೆನ್ನಯ ಮೈದಾನ ಎಂದು ನಾಮಕರಣ ಮಾಡಿ ಫ್ಲೆಕ್ಸ್ ಬ್ಯಾನರ್ ಹಾಕಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಒಂದು ಪ್ಲೆಕ್ಸ್ ಹರಿದುದರ ಪರಿಣಾಮ, ಮೂರು‌ ಮೂರು ಫಲಕಗಳನ್ನು ಅಳವಡಿಸಿ, ರಾಷ್ಟ್ರೀಯವಾದಿಗಳು ದೇಶದ ಪರ ಭರ್ಜರಿ ಧ್ವನಿ ಎತ್ತಿದ್ದಾರೆ.