Recent Posts

Thursday, September 17, 2026
ಸುದ್ದಿ

ಗುಂಟೂರು: ಆಟೋರಿಕ್ಷಾಗೆ ಟ್ರಕ್‌ ಡಿಕ್ಕಿ, ಆರು ಮಂದಿ ಸಾವು- – ಕಹಳೆ ನ್ಯೂಸ್

ಗುಂಟೂರು: ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಫಿರಂಗಿಪುರಂ ಮಂಡಲದ ರೆಪುಡಿ ಗ್ರಾಮದಲ್ಲಿ ಪ್ರಯಾಣಿಕ ಆಟೋರಿಕ್ಷಾ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, 11 ತಿಂಗಳ ಮಗು ಸೇರಿದಂತೆ ಆರು ಮಂದಿ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ.

ಜಾಹೀರಾತು

ನತದೃಷ್ಟ ಆಟೋರಿಕ್ಷಾ ನರಸರಾವ್ ಪೇಟೆಯಿಂದ ಫಿರಂಗಿಪುರಂಗೆ ಸಾಗುತ್ತಿತ್ತು. ವಿರುದ್ಧ ದಿಕ್ಕಿನಿಂದ ಬಂದ ಟ್ರಕ್ ನರಸರಾವ್ ಪೇಟೆಗೆ ಸಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮೃತರನ್ನು ಕಾಕನಿ ರಾಮದೇವಿ (40), ಕಾಕನಿ ಯಶೇಶ್ವಿ (11 ತಿಂಗಳು) ಮತ್ತು ಕಾಕನಿ ಮಾಣಿಕಾಂತ (5) ಎಂದು ಗುರುತಿಸಲಾಗಿದೆ. ಮೃತಪಟ್ಟ ಇತರ ಮೂವರ ವಿವರಗಳು ಇನ್ನೂ ಲಭ್ಯವಾಗಿಲ್ಲ.

ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಗುಂಟೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.