Thursday, May 14, 2026
ಸುದ್ದಿ

ಕೇಂದ್ರ ಸರಕಾರದಿಂದ ಕನ್ನಡಿಗರಿಗೆ ಸಿಹಿಸುದ್ದಿ : ಇನ್ಮುಂದೆ ಕನ್ನಡದಲ್ಲೇ ಪಡೆಯಬಹುದು `ರೈಲ್ವೆ ನೇಮಕಾತಿ’ ಕುರಿತ ಮಾಹಿತಿ!-ಕಹಳೆ ನ್ಯೂಸ್

ಬೆಂಗಳೂರು : ಕೇಂದ್ರ ಸರ್ಕಾರವು ಕನ್ನಡಿಗರಿಗೆ ಸಿಹಿಸುದ್ದಿ ನೀಡಿದ್ದು, ಇನ್ಮುಂದೆ ರೈಲ್ವೆ ಇಲಾಖೆಯ ನೇಮಕಾತಿ ಕುರಿತು ಮಾಹತಿಯನ್ನು ಕನ್ನಡದಲ್ಲೇ ನೀಡಲು ಬೆಂಗಳೂರು ರೈಲ್ವೆ ನೇಮಕಾತಿ ಮಂಡಳಿಯು ಈಗ ಕನ್ನಡದಲ್ಲಿ ವೆಬ್ ಆರಂಭಿಸಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ರೈಲ್ವೆ ನೇಮಕಾತಿಯಲ್ಲಿ ಇದುವರೆಗೆ ಅಧಿಸೂಚನೆಯಿಂದ ಹಿಡಿದು, ನೇಮಕಾತಿಯ ಪ್ರತಿ ಹಂತದ ಮಾಹಿತಿಯು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮಾತ್ರ ಲಭ್ಯವಿರುತ್ತಿತ್ತು. ಇನ್ಮುಂದೆ (https://www.rrbbnc.gov.in/kannada/indexk.html) ವೆಬ್ ಸೈಟ್ ನಲ್ಲಿ ಕನ್ನಡದಲ್ಲಿಯೂ ಈ ಮಾಹಿತಿ ಲಭ್ಯವಾಗಲಿದೆ. ಈಗಾಗಲೇ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವಾಗ ರೈಲ್ವೆಯು ಕನ್ನಡದಲ್ಲಿ ಪರೀಕ್ಷೆ ನಡೆಸುತ್ತಿದೆ. ಇದೀಗ ವೆಬ್ ಸೈಟ್ ನ್ನೂ ಕನ್ನಡದಲ್ಲಿಯೇ ರೂಪಿಸಿ, ಅಭ್ಯರ್ಥಿಗಳಿಗೆ ಇನ್ನಷ್ಟು ಅನುಕೂಲ ಮಾಡಿಕೊಟ್ಟಿದೆ.

ಪ್ರಾಯೋಗಿಕವಾಗಿ ಕನ್ನಡದಲ್ಲಿ ವೆಬ್ ಆರಂಭಿಸಲಾಗಿದ್ದು, ಇದು ಯಶಸ್ವಿಯಾದಲ್ಲಿ 21 ಆರ್ ಆರ್ ಬಿ ಗಳ ವೆಬ್ ಗಳನ್ನೂ ಆಯಾ ಪ್ರಾದೇಶಿಕ ಭಾಷೆಯಲ್ಲಿ ಆರಂಭಿಸಲಾಗುತ್ತದೆ ಎಂದು ಮಂಡಳಿಯ ಮೂಲಗಳು ತಿಳಿಸಿವೆ.