
ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಜರಗಿದ ವಿವಿ ಮಟ್ಟದ ಅಂತರ್‍ಕಾಲೇಜು ಸಂಗೀತ ಸ್ಪರ್ಧೋತ್ಸವ 2020 ಇದರ ಯಕ್ಷಗಾನ ಭಾಗವತಿಕೆ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಕಾಲೇಜಿನ ಅಂತಿಮ ಬಿಕಾಮ್ ವಿದ್ಯಾರ್ಥಿ ನಿತೀಶ್ ಕುಮಾರ್ ವೈ ಎಂಕಣ್ಣಮೂಲೆ ಇವರು ದ್ವಿತೀಯ ಬಹುಮಾನ ಗಳಿಸಿರುತ್ತಾರೆ ಎಂದು ಕಾಲೇಜಿನ ಪಿ ಆರ್ ಒ ಪ್ರಕಟಣೆ ತಿಳಿಸಿದೆ.















