Saturday, April 25, 2026
ಸುದ್ದಿ

ಅಂತರಾಷ್ಟ್ರೀಯ ಮಟ್ಟದಲ್ಲಿ ದಾಖಲೆ ಏರಿಕೆ ಕಂಡ ʼಚಿನ್ನʼದ ಬೆಲೆ-ಕಹಳೆ ನ್ಯೂಸ್

ಅಮೆರಿಕಾ ವಾಯನೆಲೆ ಮೇಲೆ ಇರಾನ್ ದಾಳಿ ನಂತ್ರ ಅಮೆರಿಕಾ-ಇರಾನ್ ಮಾತ್ರವಲ್ಲ ವಿಶ್ವದಾದ್ಯಂತ ಉದ್ವಿಗ್ನತೆಯ ವಾತಾವರಣ ಮನೆ ಮಾಡಿದೆ. ಇದ್ರಿಂದ ಹೂಡಿಕೆದಾರರು ಸುರಕ್ಷಿತ ಹೂಡಿಕೆಯತ್ತ ಮುಖ ಮಾಡಿದ್ದಾರೆ.

ಚಿನ್ನದ ಮೇಲೆ ಹೂಡಿಕೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ಪ್ರಪಂಚದಾದ್ಯಂತ ಬಂಗಾರದ ಬೆಲೆ ಗಗನಕ್ಕೇರಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಬುಧವಾರ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ 1,611 ಡಾಲರ್ ಪ್ರತಿ ಔನ್ಸ್ ಆಗಿದೆ. ಇದಕ್ಕೂ ಮುನ್ನ 2013ರಲ್ಲಿ 1,610.90 ಡಾಲರ್ ಪ್ರತಿ ಔನ್ಸ್ ಆಗಿ ದಾಖಲೆ ಮಟ್ಟ ತಲುಪಿತ್ತು. ಈ ವರ್ಷ ಕೇವಲ ನಾಲ್ಕೇ ನಾಲ್ಕು ವ್ಯವಹಾರಿಕ ದಿನದಲ್ಲಿ ಬಂಗಾರದ ಬೆಲೆ 2000 ರೂಪಾಯಿ ಹೆಚ್ಚಾಗಿದೆ.

ಅಂತರಾಷ್ಟ್ರೀಯ ಮಟ್ಟದಲ್ಲಾಗ್ತಿರುವ ಬದಲಾವಣೆ ದೇಶಿಯ ಮಾರುಕಟ್ಟೆ ಮೇಲೂ ಆಗ್ತಿದೆ. ಸೋಮವಾರ ಬಂಗಾರದ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿತ್ತು. ಮಂಗಳವಾರ ಸ್ವಲ್ಪಮಟ್ಟಿಗೆ ಬಂಗಾರದ ಬೆಲೆ ಇಳಿಕೆ ಕಂಡು ನೆಮ್ಮದಿ ನೀಡಿತ್ತು. ಬುಧವಾರ ಮತ್ತೆ ಬಂಗಾರ-ಬೆಳ್ಳಿ ಬೆಲೆ ಹೆಚ್ಚಾಗಿದೆ. ಸರಕು ವಿನಿಮಯ ಎಂಸಿಎಕ್ಸ್‌ನಲ್ಲಿ ಚಿನ್ನದ ವಹಿವಾಟು ಶುರುವಾದ ಮೊದಲ 20 ನಿಮಿಷಗಳಲ್ಲಿ ಚಿನ್ನದ ಬೆಲೆ 582 ರೂಪಾಯಿ ಏರಿಕೆ ಕಂಡು 10 ಗ್ರಾಂಗೆ 41,245 ರೂಪಾಯಿಯಾಗಿದೆ.