Wednesday, June 10, 2026
ಸುದ್ದಿ

ದೆಹಲಿಯಲ್ಲಿ ಮತ್ತೊಂದು ಅಗ್ನಿ ಆಕಸ್ಮಿಕ: 9 ಮಂದಿಯ ಜೀವ ಪಡೆದ ಬಟ್ಟೆಯಂಗಡಿ ಬೆಂಕಿ-ಕಹಳೆ ನ್ಯೂಸ್

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಮತ್ತೊಂದು ಅಗ್ನಿ ದುರಂತ ಸಂಭವಿಸಿದೆ. ಹೊಸದಿಲ್ಲಿಯ ಕಿರಾರಿ ಎಂಬಲ್ಲಿನ ಬಟ್ಟೆ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಸುಮಾರು ಒಂಬತ್ತು ಜನರು ಮೃತಪಟ್ಟಿದ್ದಾರೆ.

ಜಾಹೀರಾತು

ಮಧ್ಯರಾತ್ರಿ ಸುಮಾರು 12.30ರ ಸುಮಾರಿಗೆ ಅನಾಹುತ ನಡೆದಿದ್ದು, ಘಟನೆಯಲ್ಲಿ ಕನಿಷ್ಠ 12 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಈ ಬಟ್ಟೆ ಗೋದಾಮಿದ್ದು, ಬೆಂಕಿಗೆ ಬಟ್ಟೆಗಳು ಸುಟ್ಟು ಕರಕಲಾಗಿವೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರನ್ನು ರಾಮಚಂದ್ರ ಜಾ, ಸುದ್ರಿಯಾ ದೇವಿ, ಸಂದು ಜಾ, ಉದಯ್ ಚೌಧರಿ, ಮುಸ್ಕಾನ್, ಅಂಜಲಿ, ಆದರ್ಶ್, ತುಳಸಿ ಎಂದು ಗುರುತಿಸಲಾಗಿದೆ. ಓರ್ವ ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ.

ಕೆಲ ದಿನಗಳ ಹಿಂದೆ ರಾಜಧಾನಿಯ ಅನಜ್ ಮಂಡಿಯ ಕಾರ್ಖಾನೆ ಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಸುಮಾರು 43 ಮಂದಿ ಮೃತಪಟ್ಟಿದ್ದರು.