Wednesday, March 18, 2026
ಸುದ್ದಿ

ವಿವಾಹ ವಾರ್ಷಿಕೋತ್ಸವಕ್ಕೆ ಕೊಹ್ಲಿ ತನ್ನ ಪತ್ನಿಗೆ ನೀಡಿದ ‘ವಿಶೇಷ ಗಿಫ್ಟ್’ ಏನು ಗೊತ್ತೇ- – ಕಹಳೆ ನ್ಯೂಸ್

ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್‍ನ ಇನ್ನೊಂದು ಮುಖವನ್ನು ಪ್ರದರ್ಶಿಸಲು ಆಯ್ಕೆ ಮಾಡಿಕೊಂಡದ್ದು ತಮ್ಮ 2ನೇ ವಿವಾಹ ವಾರ್ಷಿಕೋತ್ಸವ ದಿನವನ್ನು. ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿ ಸರಣಿ ವಶಪಡಿಸಿಕೊಳ್ಳುವ ಮೂಲಕ ಪತ್ನಿ ಅನುಷ್ಕಾ ಶರ್ಮಾಗೆ ವಿಶಿಷ್ಟ ಉಡುಗೊರೆ ನೀಡಿದರು.

 

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

“ಅದು ನಿಜಕ್ಕೂ ವಿಶೇಷ ಇನಿಂಗ್ಸ್ ಆಗಿತ್ತು. ಇಂದು ನಮ್ಮ ಎರಡನೇ ವಿವಾಹ ವಾರ್ಷಿಕೋತ್ಸವದ ದಿನವೂ ಆಗಿತ್ತು. ಇದು ಆಕೆಗೆ ವಿಶೇಷ ಉಡುಗೊರೆ. ಇಂದಿನದು ವಿಶೇಷ ರಾತ್ರಿ. ನಾನು ಆಡಿದ ಅತ್ಯುತ್ತಮ ಇನಿಂಗ್ಸ್ ಗಳಲ್ಲೊಂದು” ಎಂದು ಪಂದ್ಯದ ಬಳಿಕ ಬಹುಮಾನ ವಿತರಣಾ ಸಮಾರಂಭದಲ್ಲಿ ಕೊಹ್ಲಿ ಉದ್ಗರಿಸಿದರು.

ಜಾಹೀರಾತು
ಜಾಹೀರಾತು

ಬೌಂಡರಿ ಹೊಡೆಯುವುದರಲ್ಲಿ ನಿಸ್ಸೀಮ ಎನಿಸಿಕೊಂಡ ಕೊಹ್ಲಿ ಈ ಪಂದ್ಯದಲ್ಲಿ ಏಳು ಸಿಕ್ಸರ್ ಸಿಡಿಸಿ ಕೇವಲ 29 ಎಸೆತಗಳಲ್ಲಿ 70 ರನ್ ಗಳಿಸುವ ಮೂಲಕ ತಮ್ಮ ಬ್ಯಾಟಿಂಗ್ ಪ್ರತಿಭೆಯ ವಿರಾಟ ದರ್ಶನ ಮಾಡಿಸಿದರು. ಭಾರತದ ಜಯದಲ್ಲಿ ಪ್ರಧಾನ ಪಾತ್ರ ವಹಿಸಿದ ಅವರು ಟಿ-20 ಸರಣಿಯನ್ನು 2-1ರಿಂದ ವಶಪಡಿಸಿಕೊಂಡರು.

ಮೊದಲು ಬ್ಯಾಟಿಂಗ್ ನಡೆಸಿ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ಯಶಸ್ವಿಯಾದದ್ದು, ಅದರಲ್ಲೂ ಮುಖ್ಯವಾಗಿ ನಾಯಕನ ಹೊಡಿಬಡಿಯ ಬ್ಯಾಟಿಂಗ್ ಭಾರತದ ಗೆಲುವಿನ ಸೂತ್ರವಾಯಿತು.

“ನಾವು ಸಾಕಷ್ಟು ಮಾತನಾಡಿಕೊಂಡಿದ್ದೆವು. ಮೈದಾನದಲ್ಲಿ ಉತ್ತಮ ಪ್ರದರ್ಶನ ತೋರುವುದು ನಮ್ಮ ಉದ್ದೇಶವಾಗಿತ್ತು. ಸಾಮಾನ್ಯವಾಗಿ ನಾನು ಮಾಡದೇ ಇರುವುದನ್ನು ಭಿನ್ನವಾಗಿ ಪ್ರದರ್ಶಿಸಲು ನನಗೆ ಅವಕಾಶ ಸಿಕ್ಕಿತು. ಇನಿಂಗ್ಸ್ ನ ಕೊನೆವರೆಗೂ ವಿಕೆಟ್ ಕಾಪಾಡಿಕೊಳ್ಳುವಂತೆ ರಾಹುಲ್‍ಗೆ ಸೂಚಿಸಿ, ಕೆಲ ದೊಡ್ಡ ಹೊಡೆತಗಳಿಗೆ ಕೈಹಾಕುವುದಾಗಿ ಹೇಳಿದೆ” ಎಂದು ಕೊಹ್ಲಿ ಗುಟ್ಟು ಬಿಚ್ಚಿಟ್ಟರು.