Friday, March 20, 2026
ಸುದ್ದಿ

ಬೆಚ್ಚಿಬಿದ್ದ ಬೆಳೆಗಾರ, ಹೊಲದಿಂದಲೇ ಮಾಯವಾಯ್ತು 30 ಚೀಲ ಈರುಳ್ಳಿ – ಕಹಳೆ ನ್ಯೂಸ್

ಈರುಳ್ಳಿ ಬೆಲೆ ಗಗನಕ್ಕೇರುತ್ತಿದ್ದಂತೆ ಕಳ್ಳರ ಕಾಟ ಜೋರಾಗಿದೆ. ಇದರಿಂದ ಬೆಳೆಗಾರರು ರಾತ್ರಿಯೂ ಕಾವಲು ಕಾಯುವಂತಾಗಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕೊಪ್ಪಳ ತಾಲ್ಲೂಕಿನ ಡೊಂಬರಹಳ್ಳಿಯಲ್ಲಿ 2 ಲಕ್ಷ ರೂಪಾಯಿ ಮೌಲ್ಯದ 30 ಚೀಲ ಈರುಳ್ಳಿಯನ್ನು ಹೊಲದಿಂದ ಕಳವು ಮಾಡಲಾಗಿದೆ. ತಿಮ್ಮಾರೆಡ್ಡಿ ಎಂಬುವರ ಹೊಲದಲ್ಲಿ 30 ಚೀಲ ಈರುಳ್ಳಿ ಕೊಯ್ಲಿಗೆ ಬಂದಿತ್ತು. ಈರುಳ್ಳಿ ಕಟಾವು ಮಾಡಿ ಸ್ವಚ್ಛಗೊಳಿಸಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ಸಿದ್ಧಪಡಿಸಿ ಇಡಲಾಗಿತ್ತು. ಆದರೆ, ರಾತ್ರೋರಾತ್ರಿ ಕಳ್ಳರು ಈರುಳ್ಳಿ ದೋಚಿಕೊಂಡು ಹೋಗಿದ್ದಾರೆ.

ಜಾಹೀರಾತು
ಜಾಹೀರಾತು

 

ಇದರಿಂದಾಗಿ ಗ್ರಾಮದ ರೈತರು ಆತಂಕಕ್ಕೆ ಒಳಗಾಗಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಈರುಳ್ಳಿ ಹೊಲಗಳ ಕಾವಲು ಕಾಯತೊಡಗಿದ್ದಾರೆ ಎನ್ನಲಾಗಿದೆ.