Saturday, March 14, 2026
ಕ್ರೀಡೆ

India vs Bangladesh: : ಪಿಂಕ್ ಬಾಲ್ ಡೇ ನೈಟ್ ಟೆಸ್ಟ್‌: ಇಶಾಂತ್ ದಾಳಿಗೆ ತರೆಗೆಲೆಗಳಂತೆ ಉದುರಿದ ಬಾಂಗ್ಲಾ ಬ್ಯಾಟ್ಸ್​ಮನ್​ಗಳು – ಕಹಳೆ ನ್ಯೂಸ್

ಕೋಲ್ಕೊತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಭಾರತ-ಬಾಂಗ್ಲಾದೇಶ ಡೇ ನೈಟ್ ಟೆಸ್ಟ್ ಮೊದಲ ಇನಿಂಗ್ಸ್​ನಲ್ಲಿ ಬಾಂಗ್ಲಾ 106 ರನ್​ಗೆ ಸರ್ವಪತನ ಕಂಡಿದೆ.

ಟೀಂ ಇಂಡಿಯಾ ವೇಗಿಗಳ ಮಾರಕ ದಾಳಿಗೆ ತತ್ತರಿಸಿರುವ ಬಾಂಗ್ಲಾ ಬ್ಯಾಟ್ಸ್​ಮನ್​ಗಳು ಮೊದಲ ಇನಿಂಗ್ಸ್​ನಲ್ಲಿ ಕೇವಲ 30.3 ಓವರ್‌ಗಳನ್ನು ಎದುರಿಸಲು ಮಾತ್ರ ಶಕ್ತರಾದರು. ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾ ತಂಡಕ್ಕೆ ಆರಂಭದಲ್ಲೇ ಪಿಂಕ್ ಬಾಲ್ ಶಾಕ್ ನೀಡುವಲ್ಲಿ ಟೀಂ ಇಂಡಿಯಾ ವೇಗಿಗಳು ಯಶಸ್ವಿಯಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಬಾಂಗ್ಲಾ ಆರಂಭಿಕ ಇಮ್ರುಲ್ ಕೇಯ್ಸ್‌ರನ್ನು (4) ಬಲಗೈ ವೇಗಿ ಇಶಾಂತ್ ಶರ್ಮಾ ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿ ಭಾರತಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಇದರೊಂದಿಗೆ ಪಿಂಕ್​ ಚೆಂಡಿನಲ್ಲಿ ಭಾರತ ಪರ ಮೊದಲ ವಿಕೆಟ್ ಪಡೆದ ಬೌಲರ್ ಎಂಬ ಹಿರಿಮೆಗೆ ಪಾತ್ರರಾದರು. ಇಶಾಂತ್ ಬೆನ್ನಲ್ಲೇ ದಾಳಿಗಿಳಿದ ಉಮೇಶ್ ಯಾದವ್ ಕರಾರುವಾಕ್ ದಾಳಿ ಸಂಘಟಿಸುವಲ್ಲಿ ಯಶಸ್ವಿಯಾದರು. ಬಾಂಗ್ಲಾದೇಶದ ನಾಯಕ ಮೊಮಿನುಲ್ ಹಕ್​ರನ್ನು ಶೂನ್ಯಕ್ಕೆ ಪೆವಿಲಿಯನ್ ಕಳುಹಿಸಿದ ಉಮೇಶ್ ಯಾದವ್, ಬಳಿಕ ಬಂದ ಮಿಥನ್(0) ರನ್ನು ಖಾತೆ ತೆರೆಯುವ ಮುನ್ನವೇ ಮರಳಿ ಕಳುಹಿಸಿ ಡಬಲ್ ಶಾಕ್ ನೀಡಿದರು.

ಜಾಹೀರಾತು
ಜಾಹೀರಾತು

ಇನ್ನು ರಿವರ್ಸ್ ಸ್ವಿಂಗ್ ಮೂಲಕ ಗಮನ ಸೆಳೆದ ಮೊಹಮ್ಮದ್ ಶಮಿ ತಂಡದ ಮೊತ್ತ 26 ಇದ್ದಾಗ ಬಾಂಗ್ಲಾಗೆ ಮತ್ತೊಂದು ಆಘಾತ ನೀಡಿದರು. ತಂಡದಲ್ಲಿರುವ ಅನುಭವಿ ಆಟಗಾರ ಮುಷ್ಫಿಕರ್ ರಹೀಂ (0) ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಟೀಂ ಇಂಡಿಯಾಗೆ 4ನೇ ಯಶಸ್ಸು ತಂದುಕೊಟ್ಟರು.

ಆದರೆ ಮತ್ತೊಂದೆಡೆ ಭಾರತೀಯ ಬೌಲರುಗಳನ್ನು ಆತ್ಮ ವಿಶ್ವಾಸದಿಂದಲೇ ಎದುರಿಸಿದ ಆರಂಭಿಕ ಆಟಗಾರ ಎರಡಂಕಿ ಮೊತ್ತ ಗಳಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದರು. ಶದ್ಮಾನ್ ಇಸ್ಲಾಂ ಅವರು ವೈಯುಕ್ತಿಕ ಮೊತ್ತ 29 ರನ್​ಗಳಿಸಿದ್ದ ವೇಳೆ ಉಮೇಶ್ ಯಾದವ್ ಅವರ ಸೀಮ್​ನ್ನು ಗುರುತಿಸುವಲ್ಲಿ ಎಡವಿ ವೃದ್ಧಿಮಾನ್ ಸಹ ಕ್ಯಾಚ್ ನೀಡಿ 5ನೇ ವಿಕೆಟ್​ ಆಗಿ ಹೊರ ನಡೆದರು.

ಇನ್ನು ಅನುಭವಿ ಬ್ಯಾಟ್ಸ್​ಮನ್ ಮೊಹಮದುಲ್ಲಾ ಸಹ ಕೇವಲ 6 ರನ್​ಗಳಿಸಿ ಮುಗ್ಗರಿಸುವ ಮೂಲಕ ಟೀಂ ಇಂಡಿಯಾದ 6ನೇ ಯಶಸ್ಸಿಗೆ ಕಾರಣರಾದರು. ಇಶಾಂತ್ ಶರ್ಮಾದ ವೇಗವನ್ನು ಗುರುತಿಸುವಲ್ಲಿ ವಿಫಲರಾದ ಮೊಹಮದುಲ್ಲಾ ಸಹಾಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಊಟದ ವಿರಾಮದ ಬಳಿಕವೂ ಬಾಂಗ್ಲಾ ಬ್ಯಾಟ್ಸ್​ಮನ್​ಗಳನ್ನು ಕಾಡುವಲ್ಲಿ ಭಾರತ ವೇಗಿಗಳು ಯಶಸ್ವಿಯಾದರು. ಒಂದಷ್ಟು ಹೊತ್ತು ಕ್ರೀಸ್​ನಲ್ಲಿ ಉಳಿದಿದ್ದ ಲಿಟನ್ ದಾಸ್ ಗಾಯಗೊಂಡು ನಿವೃತ್ತಿ ಹೊಂದಿದರು. ನಂತರ ನಯೀಮ್ ಹಸನ್ ಜೊತೆ ಇನಿಂಗ್ಸ್ ಕಟ್ಟುವ ಜವಾಬ್ದಾರಿ ವಹಿಸಿಕೊಂಡ ಇಬಾದತ್ ಹುಸೇನ್ 1 ರನ್ ಗಳಿಸಿ ಹೊರ ನಡೆದರು. ಇದರ ಬೆನ್ನಲ್ಲೇ ಮೆಹಿದಿ ಹಸನ್ (8) ಹೊರದಬ್ಬುವಲ್ಲಿ ಇಶಾಂತ್ ಶರ್ಮಾ ಸಫಲರಾದರು.

ಇದರೊಂದಿಗೆ 98 ರನ್ ಗಳಿಸುವಷ್ಟರಲ್ಲಿ ಬಾಂಗ್ಲಾ ತಂಡ ತನ್ನ ಪ್ರಮುಖ ಎಂಟು ವಿಕೆಟ್‌ಗಳನ್ನು ಕಳೆದುಕೊಂಡಿತು. ಕೊನೆಯಲಲ್ಲಿ ಅಬು ಜಯೀದ್​ರನ್ನು ಪೆವಿಲಿಯನ್​ಗೆ ಕಳುಹಿಸುವಲ್ಲಿ ಶಮಿ ಯಶಸ್ಸಿಯಾಗುವುದರೊಂದಿಗೆ ಬಾಂಗ್ಲಾ 106 ಕ್ಕೆ ಇನಿಂಗ್ಸ್ ಕೊನೆಗೊಳಿಸಿತು.

ಇಶಾಂತ್ ಮಾರಕ ದಾಳಿ:

ಭಾರತ ಪರ ಮಾರಕ ದಾಳಿ ಸಂಘಟಿಸಿದ ಇಶಾಂತ್ ಶರ್ಮಾ 12 ಓವರ್​ಗಳಲ್ಲಿ 22 ರನ್​ಗಳನ್ನು ನೀಡಿ 5 ವಿಕೆಟ್​ಗಳನ್ನು ಉರುಳಿಸಿದರು. ಈ ಮೂಲಕ ಚೊಚ್ಚಲ ಪಿಂಕ್ ಬಾಲ್ ಪಂದ್ಯದಲ್ಲಿ ಭಾರತದ ಪರ ಐದು ವಿಕೆಟ್​ಗಳ ಗೊಚ್ಛ ಪಡೆದ ದಾಖಲೆ ನಿರ್ಮಿಸಿದರು. ಇನ್ನು ಉಮೇಶ್ ಯಾದವ್ 3 ವಿಕೆಟ್ ಉರುಳಿಸಿದರೆ, ಶಮಿ 2 ವಿಕೆಟ್​ಗಳನ್ನು ಪಡೆದು ಗಮನ ಸೆಳೆದರು