Wednesday, March 18, 2026
ಸುದ್ದಿ

ಸಂಚಾರಿ ನಿಯಮಗಳ ಜನಜಾಗೃತಿ ಕಾರ್ಯಾಗಾರ-ಕಹಳೆ ನ್ಯೂಸ್

ನೆಲ್ಯಾಡಿ: ಜ್ಞಾನೋದಯ ಬೆಥನಿ ಪದವಿ ಪೂರ್ವ ಕಾಲೇಜಿನ ಸಿಲ್ವರ್ ಜುಬ್ಲಿ ಸಭಾಂಗಣದಲ್ಲಿ ಇತ್ತೀಚೆಗೆ ಹದಿಹರೆಯ ಮತ್ತು ಶಾರೀರಿಕ ಬೆಳವಣಿಗೆ ಬಗ್ಗೆ ಮಾಹಿತಿ ಕಾರ್ಯಾಗಾರವು ಜರುಗಿತು.


ಈ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಸಂಸ್ಥೆಯ ಪ್ರಾಂಶುಪಾಲರಾದ ರೆ|ಫಾ| ಮ್ಯಾಥ್ಯೂ ಪ್ರಫುಲ್ ಒ.ಐ.ಸಿ.ಯವರು ಮಕ್ಕಳ ಮಾನಸಿಕ ಮತ್ತು ಶಾರೀರಿಕ ಬೆಳವಣೆಗೆಯ ಹಂತದಲ್ಲಿ ತಮ್ಮಲ್ಲಿ ಉಂಟಾಗುವ ಬದಲಾವಣೆಗಳ ಬಗ್ಗೆ ಅರಿತುಕೊಳ್ಳುವುದು ಬಹಳ ಅತ್ಯಗತ್ಯ ಎಂದು ತಿಳಿಸಿದರು. ಮಣಿಪಾಲದ ಆಸ್ಪತ್ರೆಯ ಡಾ| ಬಿನ್ಸಿ ಎಂ. ಜೋರ್ಜ್ , ಡಾ| ಸೋಯುಝ್ ಜೋನ್ ಮತ್ತು ರೆ| ಫಾ| ಸಲಿನ್ ಜೋಸೆಫ್‍ರವರು ಈ ಕಾರ್ಯಾಗಾರವನ್ನು ನಿರ್ವಹಿಸಿ ಕೊಟ್ಟರು. ಇಂಗ್ಲೀಷ್ ಕ್ಲಬ್‍ನ ಆಯೋನಾಕಾರರಾಗಿ ಅಧ್ಯಾಪಕರಾದ ಜೋಸ್ ಪ್ರಕಾಶ್ , ಮಂಜು ಫಿಲಿಪ್, ವೇರೋನಿಕಾ ಮತ್ತು ಲಿಸ್ಸಿಯವರು ಸಹಕರಿಸದರು. ಈ ಸಂದರ್ಭದಲ್ಲಿ ರೆ|ಫಾ ಐಸಕ್ ಸಾಮ್ ಒಐಸಿ, ಉಪಸ್ಥಿತರಿದ್ದರು. ಕುಮಾರಿ ರಕ್ಷಾ ಮತ್ತು ತಂಡ ಪ್ರಾರ್ಥಿಸಿದರು. ಕುಮಾರಿ ಬಿಫಿನ ಸ್ವಾಗತಿಸಿ, ಕುಮಾರಿ ಅನುಷ್ಕಾ ಖತೀಜಾ ವಂದಿಸಿದರು. ಕುಮಾರಿ ರೋಸ್ಲೀನಾ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು