Saturday, May 9, 2026
ಸುದ್ದಿ

ವಿವೇಕಾನಂದ ಸ್ನಾತಕೋತ್ತರ ವಾಣಿಜ್ಯ ವಿಭಾಗದಿಂದ ಅಧ್ಯಯನ ಪ್ರವಾಸ-ಕಹಳೆ ನ್ಯೂಸ್

ಪುತ್ತೂರು: ಇಲ್ಲಿನ ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರದ ದ್ವಿತೀಯ ವರ್ಷದ ಸ್ನಾತಕೋತ್ತರ, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರನ್ನೊಳಗೊಂಡತೆ ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನ ರೈತಬಂಧು ಅಕ್ಕಿ ಉತ್ಪಾದನ ಘಟಕಕ್ಕೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿರಿ ಗ್ರಾಮೋದ್ಯೋಗ ಕೇಂದ್ರಕ್ಕೆ ಒಂದು ದಿನದ ವಾಣಿಜ್ಯ ಕೇಂದ್ರಗಳ ಅಧ್ಯಯನ ಪ್ರವಾಸವನ್ನು ಹಮ್ಮಿಕೊಳ್ಳಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ವಿದ್ಯಾರ್ಥಿಗಳು ಈ ವಾಣಿಜ್ಯ ಕೇಂದ್ರಗಳಿಗೆ ಭೇಟಿ ನೀಡಿದ ಅಲ್ಲಿನ ಕಾರ್ಯವೈಖರಿಯನ್ನು ವೀಕ್ಷಿಸಿ ಅಧ್ಯಯನ ವರದಿಯನ್ನು ರೂಪಿಸಿದರು. ಈ ಸಂದರ್ಭ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕಿ ಡಾ. ವಿಜಯಸರಸ್ವತಿ ಬಿ., ಉಪನ್ಯಾಸಕಿಯರಾದ ಅನನ್ಯಾ ವಿ, ಲಕ್ಷಿö್ಮÃ ಭಟ್, ಉಪನ್ಯಾಸಕರಾದ ರಾಘವೇಂದ್ರ, ವರ್ಷಿತ್ ಕೆ. ಉಪಸ್ಥಿತರಿದ್ದರು.