Saturday, March 7, 2026
ಸಿನಿಮಾ

ಮಹಿಳೆಯರು ಗಂಡಸರನ್ನು ಗ್ಯಾಂಗ್ ರೇಪ್ ಮಾಡ್ಬೇಕಂತೆ…! ವಿಚಿತ್ರ ಹೇಳಿಕೆ ಕೊಟ್ಟದ್ದು ಯಾರು ಗೊತ್ತಾ..? – ಕಹಳೆ ನ್ಯೂಸ್

ಮಹಿಳೆಯರು ಗಂಡಸರನ್ನು ಗ್ಯಾಂಗ್ ರೇಪ್ ಮಾಡಬೇಕು… ಇದು ಪಾಕಿಸ್ತಾನದ ಬರಹಗಾರ ಖಲೀಲ್ ಉರ್ ರೆಹಮಾನ್ ಕಮಾರ್ ಮಾತು. ತಮ್ಮ ಹೊಸ ನಾಟಕ `ಮೇರೆ ಪಾಸ್ ತುಮ್ ಹೋ’ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಖಲೀಲ್ ಇಂತಹ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇವರ ಹೊಸ ನಾಟಕ ವಿವಾಹಿತೆಯೊಬ್ಬಳ ಕಥಾ ವಸ್ತುವನ್ನು ಹೊಂದಿದೆಯಂತೆ.

`ಪಾಕಿಸ್ತಾನದಲ್ಲಿ ನನ್ನಷ್ಟು ದೊಡ್ಡ ಸ್ತ್ರೀವಾದಿಯನ್ನು ನೀವು ನೋಡಲು ಸಾಧ್ಯವೇ ಇಲ್ಲ’ ಎಂದು ಹೇಳುತ್ತಲೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಖಲೀಲ್, ಸ್ವಾಭಿಮಾನ ಮತ್ತು ಗೌರವ ಮಹಿಳೆಯ ನಿಜವಾದ ಸೌಂದರ್ಯ ಎಂಬುದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಹೀಗೆ ಮಾತು ಮುಂದುವರಿಯುತ್ತಾ, `ಕೆಲವರು ನನ್ನ ಬಳಿ ಸಮಾನತೆಯ ಬಗ್ಗೆ ಮಾತನಾಡುತ್ತಾರೆ. ಆಗ ನಾನು, ನೀವು ಎಂದಾದರೂ ಐವರು ಪುರುಷರು ಮಹಿಳೆಯೊಬ್ಬಳನ್ನು ಅಪಹರಣ ಮಾಡಿರುವ ಸುದ್ದಿಯನ್ನು ಕೇಳಿದ್ದೀರಾ…? ಎಂದು ಕೇಳುತ್ತೇನೆ. ಆಗ ಅವರು ಹೌದು ಎನ್ನುತ್ತಾರೆ. ಆಗ ನಾನು ಅವರಿಗೆ ಮತ್ತೆ ಮರು ಪ್ರಶ್ನೆ ಹಾಕುತ್ತೇನೆ. ಒಂದೊಮ್ಮೆ ನೀವು ಐದು ಮಹಿಳೆಯರು ಪುರುಷನೊಬ್ಬನನ್ನು ಕಿಡ್ನ್ಯಾಪ್ ಮಾಡಿದ ಸುದ್ದಿ ಕೇಳಿದರೆ ಹೇಗಿರುತ್ತದೆ…? ಮಹಿಳೆಯರಿಗೆ ಸಮಾನತೆ ಬೇಕೆಂದರೆ ಅವರೂ ಪುರುಷರು ಮಾಡಿದಂತೆ ಮಾಡಬೇಕು. ಯಾವ ಸಮಾನತೆಯನ್ನು ನೀವು ಕೇಳುತ್ತಿದ್ದೀರಿ… ಹೋಗಿ ಬಸ್ ರಾಬರಿ ಮಾಡ್ಬೇಕು ಎಂದೆನಿಸಿದರೆ ಮಾಡಿ, ಪುರುಷನೊಬ್ಬನನ್ನು ಎಳೆದೊಯ್ದು ಗ್ಯಾಂಗ್ ರೇಪ್ ಮಾಡಬೇಡಿ. ಆಗ ಮಾತ್ರ ಇಲ್ಲಿ ಸಮಾನತೆ ಇದೆ ಎಂದು ನಾನು ತಿಳಿದುಕೊಳ್ಳುತ್ತೇನೆ’ ಎಂದು ಇವರು ವಿಲಕ್ಷಣವಾಗಿ ಮಾತನಾಡಿದ್ದಾರೆ.

video courtesy : Entertainment Pakistan / youtube

`ಮಹಿಳೆಯರಿಗೆ ಅವರ ಹಕ್ಕುಗಳ ಬಗ್ಗೆ ತಿಳಿದಿಲ್ಲ. ಆದರೆ, ಅವರು ತಮ್ಮಗಿಲ್ಲದ ಹಕ್ಕನ್ನು ಪುರುಷರೊಂದಿಗೆ ಹಂಚಿಕೊಳ್ಳಲು ಬಯಸುತ್ತಾರೆ. ಈ ಉಪಖಂಡದಲ್ಲಿ ಮಹಿಳೆಯರು ಶಾರ್ಟ್ಸ್ ಧರಿಸಲು ಅವಕಾಶವಿಲ್ಲ’ ಎಂದು ಹೇಳಿದ ಇವರು, ತನ್ನ ಮಾತು ವಿರೋಧಕ್ಕೂ ಗುರಿಯಾಗುತ್ತದೆ ಅಂತಾನೂ ಹೇಳಿಕೊಂಡಿದ್ದಾರೆ. ಅದು ನಿಜ ಕೂಡಾ ಆಗಿದೆ. ಖಲೀಲ್ ಹೇಳಿಕೆ ಒಂದಷ್ಟು ವಿರೋಧಕ್ಕೂ ಗುರಿಯಾಗಿದೆ.