Thursday, March 19, 2026
ಸುದ್ದಿ

8 ನೇ ತರಗತಿ ವಿದ್ಯಾರ್ಥಿಯನ್ನೇ ಗುಂಡಿಕ್ಕಿ ಕೊಂದ ಕಾನ್ಪುರದ ಶಿಕ್ಷಕ-ಕಹಳೆ ನ್ಯೂಸ್

ಕಾನ್ಪುರ : ತಾನು ಅಮಾನತಿಗೆ ಕಾರಣಳಾದ ಹಿನ್ನೆಲೆಯಲ್ಲಿ ಶಿಕ್ಷಕನೊಬ್ಬ 8 ನೇ ತರಗತಿ ವಿದ್ಯಾರ್ಥಿಯನ್ನು ಗುಂಡಿಕ್ಕಿ ಕೊಂದ ಭಯಾನಕ ಘಟನೆ ಉತ್ತರ ಪ್ರದೇಶದ ಕಾನ್ಪುರ್ ದೇಹತ್ ಜಿಲ್ಲೆಯಲ್ಲಿ ನಡೆದಿದೆ.

ಬಾಲಕಿ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಶಿಕ್ಷಕ ಮೂರು ಗುಂಡುಗಳನ್ನು ಹಾರಿಸಿದ್ದಾನೆ. ಒಂದು ಗುಂಡು ಅಪ್ರಾಪ್ತ ಬಾಲಕಿಯ ಕುತ್ತಿಗೆಗೆ ಬಡಿದು ಅವಳು ನೆಲದ ಮೇಲೆ ಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ರಾತ್ರಿ ಆಕೆ ಸಾವನ್ನಪ್ಪಿದ್ದಾಳೆ. .

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಪಿ ಶಿಕ್ಷಕನನ್ನು ಶೈಲೇಂದ್ರ ರಜಪೂತ್ ಎಂದು ಗುರುತಿಸಲಾಗಿದೆ. ಈತ ವಿದ್ಯಾರ್ಥಿಗೆ ದೀರ್ಘಕಾಲದಿಂದ ಕಿರುಕುಳ ನೀಡುತ್ತಿದ್ದ, ಈ ಕಾರಣದಿಂದಾಗಿ ಆತನನ್ನ ಶಾಲೆಯಿಂದ ಅಮಾನತು ಮಾಡಲಾಯಿತು. ಇದರಿಂದ ಕೋಪಗೊಂಡ ಆತ ವಿದ್ಯಾರ್ಥಿನಿಯ ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ.

ಜಾಹೀರಾತು
ಜಾಹೀರಾತು

ಘಟನೆಯ ನಂತರ, ಕೋಪಗೊಂಡ ಗ್ರಾಮಸ್ಥರು ಪ್ರತಿಭಟನೆ ನಡೆಸಿ, ರಸ್ತೆಗಳನ್ನು ತಡೆದರು. ಬಾಲಕಿಯ ಕುಟುಂಬ ಸದಸ್ಯರು ಆರೋಪಿಗಳಿಗೆ ಮರಣದಂಡನೆ ವಿಧಿಸುವಂತೆ ಒತ್ತಾಯಿಸಿದ್ದಾರೆ.