Friday, March 13, 2026
ರಾಜಕೀಯ

ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಧ್ಯವಿದ್ದರೆ ಮತ್ತೆ 370, 35ಎ ವಿಧಿ ಜಾರಿಗೊಳಿಸಿ ; ಮಹಾರಾಷ್ಟ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರತಿಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ಸವಾಲು – ಕಹಳೆ ನ್ಯೂಸ್

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಂದ್ರದ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ ರದ್ದುಗೊಳಿಸಿರುವ 370 ಮತ್ತು 35ಎ ವಿಧಿಗಳನ್ನು ಸಾಧ್ಯವಿದ್ದರೆ ಮರುಜಾರಿಗೊಳಿಸುವಂತೆ ಪ್ರತಿಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ಸವಾಲು ಹಾಕಿದ್ದಾರೆ.

ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ನಿಮಿತ್ತ ಜಲಗಾಂವ್​ನಲ್ಲಿ ಭಾನುವಾರ ಆಯೋಜನೆಗೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಜಮ್ಮು ಮತ್ತು ಕಾಶ್ಮೀರ ಆದಷ್ಟು ಬೇಗ ಸಹಜ ಸ್ಥಿತಿಗೆ ಮರಳುವಂತೆ ಮಾಡಲು ಕೇಂದ್ರ ಸರ್ಕಾರ ಶ್ರಮಿಸುತ್ತಿದೆ. ಈ ಕಾರ್ಯಕ್ಕೆ ಇನ್ನೂ ನಾಲ್ಕು ತಿಂಗಳಾದರೂ ಬೇಕಾಗುತ್ತದೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ನಿಮಗೆ ತಾಕತ್ತು ಇದೆ ಎನ್ನುವುದಾದರೆ ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆಗಳು ಅಷ್ಟೇ ಅಲ್ಲ. ಭವಿಷ್ಯದ ಎಲ್ಲ ಚುನಾವಣೆಗಳ ನಿಮ್ಮ ಪ್ರಣಾಳಿಕೆಗಳಲ್ಲಿ ಈ ವಿಷಯವನ್ನು ಸೇರಿ ನೋಡಿ ಎಂದು ಹೇಳಿದರು.

ಜಾಹೀರಾತು
ಜಾಹೀರಾತು

ಛತ್ರಪತಿ ಶಿವಾಜಿ ಮಹಾರಾಜರು ಆಳಿದ ಪವಿತ್ರ ಭೂಮಿಯಿಂದ ಈ ಸವಾಲು ಹಾಕುತ್ತಿದ್ದೇನೆ. ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ ಕುರಿತು ನಿಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು. ಅಷ್ಟೇ ಅಲ್ಲ, ಭವಿಷ್ಯದ ಎಲ್ಲ ಚುನಾವಣೆಗಳಲ್ಲೂ ಕಾಶ್ಮೀರ ಕಣಿವೆಯಲ್ಲಿ ಮತ್ತೆ 370 ಮತ್ತು 35ಎ ವಿಧಿಗಳನ್ನು ಜಾರಿಗೊಳಿಸುವ ವಿಷಯವನ್ನು ಅವರವರ ಪ್ರಣಾಳಿಕೆಗಳಲ್ಲಿ ಸೇರಿಸಬೇಕು ಎಂದರು.

PM Modi addresses a public meeting in Jalgaon, Maharashtra :

 

ಕಾಶ್ಮೀರ ಕಣಿವೆಯಲ್ಲಿ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಾ, ಅಲ್ಲಿನ ಜನರನ್ನು ಮರಳು ಮಾಡಲು ಪ್ರತಿಪಕ್ಷಗಳು ಇನ್ನಿಲ್ಲದ ನಾಟಕ ಆಡುತ್ತಿವೆ ಎಂದು ದೂರಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಅಗತ್ಯ ಸೌಲಭ್ಯಗಳನ್ನು ಸಿಗುವಂತೆ ಮಾಡಲು ಅಸಾಧ್ಯ ಎಂಬ ಪರಿಸ್ಥಿತಿ ಇತ್ತು. ಅದುವರೆಗೂ ಯಾರೋಬ್ಬರಿಗೂ ಸಾಧ್ಯ ಎನಿಸದ ವಿಶೇಷ ಸ್ಥಾನಮಾನ ರದ್ದುಗೊಳಿಸುವ ನಿರ್ಧಾರವನ್ನು ನಮ್ಮ ಸರ್ಕಾರ ಕೈಗೊಂಡಿತು. ಇದಾದ ನಂತರದಲ್ಲಿ ವಾಲ್ಮೀಕಿ ಜಯಂತಿ ಈ ದಿನದಂದು ನಾನು ಅಲ್ಲಿನ ವಾಲ್ಮೀಕಿ ಬಂಧುಗಳನ್ನು ಅಪ್ಪಿಕೊಂಡು ಸಂತೈಸಬಹುದಾಗಿದೆ ಎಂದು ತಮ್ಮ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.