Monday, March 16, 2026
ಸುದ್ದಿ

ನವೆಂಬರ್‍ ವರೆಗೂ ತಪ್ಪದು ಕಣ್ಣೀರು; ಇನ್ನೆರಡು ತಿಂಗಳು ತಗ್ಗೋದಿಲ್ಲ ಈರುಳ್ಳಿ ಬೆಲೆ; ನಗರಗಳಲ್ಲಿ ಕೆ.ಜಿ.ಈರುಳ್ಳಿಗೆ 60 ರೂ. – ಕಹಳೆ ನ್ಯೂಸ್

ನವದೆಹಲಿ : ಭಾರತದಲ್ಲಿ ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ. ಗಗನಮುಖಿಯಾಗುತ್ತಿರುವ ಈರುಳ್ಳಿ ಗೃಹಿಣಿಯರ ಕಣ್ಣಲ್ಲಿ ನೀರು ತರಿಸುತ್ತಿದೆ. ಈರುಳ್ಳಿ ಬೆಲೆ ಇಂದೂ ಸಹ ಯಥಾಸ್ಥಿತಿ ಕಾಯ್ದಕೊಂಡಿದ್ದು, ಕೆ.ಜಿ.ಗೆ 80 ರೂ. ಇದೆ. ಇನ್ನೂ ಎರಡು ತಿಂಗಳು ಈರುಳ್ಳಿ ಬೆಲೆಯಲ್ಲಿ ಕಡಿಮೆಯಾಗುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.

ಈರುಳ್ಳಿ ಪೂರೈಕೆಯಲ್ಲಿ ಬಿಕ್ಕಟ್ಟು ಉಂಟಾಗಿರುವ ಪರಿಣಾಮ ಭಾರತದ ಪ್ರಮುಖ ನಗರಗಳಲ್ಲಿ ಈರುಳ್ಳಿ ಬೆಲೆ ಅಧಿಕವಾಗಿದೆ. ಮಹಾನಗರಿ ಮುಂಬೈ ಮತ್ತು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಈರುಳ್ಳಿ ದರ ಸ್ಥಿರತೆ ಕಾಯ್ದುಕೊಂಡಿದೆ. ಒಂದು ಕೆ.ಜಿ. ಈರುಳ್ಳಿ ಬೆಲೆ 75-80ರೂ. ಇದೆ. ರಾಜಧಾನಿ ಬೆಂಗಳೂರು, ಚೆನ್ನೈ ಮತ್ತು ಡೆಹ್ರಾಡೂನ್ ನಗರಗಳಲ್ಲಿ ಕೆ.ಜಿ.ಈರುಳ್ಳಿಗೆ 60 ರೂ. ಇದೆ. ಹೈದರಾಬಾದ್‍ನಲ್ಲಿ ಈರುಳ್ಳಿ ಬೆಲೆ ಸ್ವಲ್ಪ ಕಡಿಮೆ ಇದ್ದು, ಕೆ.ಜಿ.ಈರುಳ್ಳಿಗೆ 41-46 ರೂ. ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈರುಳ್ಳಿ ಬೆಲೆ ಅಧಿಕವಾಗಲು ಕಾರಣವೇನು?
ಈ ಬಾರಿ ಈರುಳ್ಳಿ ಬೆಲೆ ಹೆಚ್ಚಾಗಲು ಪ್ರಮುಖ ಕಾರಣ ಅಧಿಕ ಮಳೆ. ಈ ವರ್ಷ ಭಾರೀ ಪ್ರಮಾಣದಲ್ಲಿ ಮಾನ್ಸೂನ್ ಮಳೆಯಾದ ಕಾರಣ, ಈರುಳ್ಳಿ ಬೆಳೆ ನಾಶವಾಗಿದೆ. ಹೀಗಾಗಿ ಈರುಳ್ಳಿ ಬೆಳೆಯ ಪ್ರಮಾಣ ಕಡಿಮೆಯಾಗಿದ್ದು, ಬೆಲೆ ಏರಿಕೆಯಾಗಿದೆ. ಇದೇ ಪರಿಸ್ಥಿತಿ ಇನ್ನೂ ಒಂದು ತಿಂಗಳು ಇರುವ ಸಾಧ್ಯತೆ ಇದೆ.

ಜಾಹೀರಾತು
ಜಾಹೀರಾತು

“ಸತತ ಮೂರು ವರ್ಷಗಳಿಂದ ಈರುಳ್ಳಿ ಬೆಳೆ ನಷ್ಟವಾಗಿದ್ದರಿಂದ, ರೈತರು ಕಳೆದ ವರ್ಷ ಬೆಳೆಗಳನ್ನು ರಸ್ತೆಗಳಲ್ಲಿ ಎಸೆದಿದ್ದರು. ಇಬ್ಬರು ರೈತರು ನಾಸಿಕ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು ಈಗ, ರೈತರು ಮೂರು ವರ್ಷಗಳ ನಷ್ಟಕ್ಕೆ ಪರಿಹಾರ ಕೊಡಿ ಅಂತಾ ಕೇಳುತ್ತಿದ್ದೇವೆ,” ಎಂದು ನಾಸಿಕ್‍ನ ಈರುಳ್ಳಿ ವ್ಯಾಪಾರಿ ಹಿರ್ಮಾನ್ ಪರದೇಶಿ ಅಳಲು ತೋಡಿಕೊಂಡರು.

“ಕಳೆದ ವರ್ಷ ರೈತರು ಸಾಮಾನ್ಯ ಉತ್ಪಾದನೆಯ ಅರ್ಧದಷ್ಟು ಮಾತ್ರ ಈರುಳ್ಳಿ ಬೆಳೆದಿದ್ದರು. ಆದರೆ ಮೇ ತಿಂಗಳಲ್ಲಿನ ಬಿಸಿಲಿನ ತಾಪ ಮತ್ತು ನಂತರದ ಭಾರೀ ಮಳೆಯಿಂದಾಗಿ ಕೇವಲ 50 ಪ್ರತಿಶತದಷ್ಟು ಬೆಳೆ ಮಾತ್ರ ಉಳಿದಿದೆ” ಎಂದು ರೈತ ಹಿರ್ಮಾನ್ ಹೇಳಿದರು.

ಈ ವಿಷಯದಲ್ಲಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪರದೇಶಿ ಖಂಡಿಸಿದರು. “ಕಳೆದ ವರ್ಷ ರೈತರು ತಮ್ಮ ಬೆಳೆಗಳನ್ನು ರಸ್ತೆಗೆ ಎಸೆದಾಗ, ಸರ್ಕಾರ ಏನನ್ನೂ ಹೇಳಲಿಲ್ಲ, ಈರುಳ್ಳಿ ತಿನ್ನುವ ಗ್ರಾಹಕರೂ ಸಹ ಧ್ವನಿ ಎತ್ತಲಿಲ್ಲ. ಈಗ ಬೆಲೆಗಳು ಹೆಚ್ಚಾಗಿರುವುದರಿಂದ ಎಲ್ಲರೂ ರೈತರನ್ನು ದೂಷಿಸುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಕ್ಷಿಣ ಭಾರತದ ರಾಜ್ಯಗಳು, ಮಧ್ಯಪ್ರದೇಶ, ಉತ್ತರ ಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಭಾರಿ ಮಳೆಯಿಂದಾಗಿ ಬೆಳೆಗಳು ಹಾನಿಗೊಳಗಾಗಿವೆ. ಹಾಗೂ ಸೆಪ್ಟೆಂಬರ್‍ನಲ್ಲಿ ಬರುವ ಹೊಸ ಈರುಳ್ಳಿ ಬೆಳೆ ಒಂದು ತಿಂಗಳು ವಿಳಂಬವಾಗಿದೆ. ಏರುತ್ತಿರುವ ಈರುಳ್ಳಿ ಬೆಲೆಯನ್ನು ರೈತರು ನವೆಂಬರ್‍ವರೆಗೆ ಎದುರಿಸಬೇಕಾಗುತ್ತದೆ ಎಂದು ರೈತರು ಎಚ್ಚರಿಕೆ ನೀಡಿದರು.

ಕಳೆದ ಐದು ವರ್ಷಗಳಿಂದ ಈರುಳ್ಳಿ ಉತ್ಪಾದನೆಯ ಕುರಿತಾದ ಸರ್ಕಾರದ ದತ್ತಾಂಶವನ್ನು ವಿಶ್ಲೇಷಿಸಿದರೆ, 2018 ಕ್ಕೆ ಹೋಲಿಸಿದರೆ 2019 ರಲ್ಲಿ ಈರುಳ್ಳಿ ಉತ್ಪಾದನೆಯ ಪ್ರಮಾಣ ಅರ್ಧದಷ್ಟು ಕಡಿಮೆಯಾಗಿದೆ.