
ಭಟ್ಕಳ ಕ್ಷೇತ್ರದ ಕೆಲ ಸಮಸ್ಯೆಗಳ ಕುರಿತು ಮತ್ತು ವಿಶೇಷವಾಗಿ ಹೊನ್ನಾವರ ತಾಲ್ಲೂಕಿನ ಮಂಕಿಯಲ್ಲಿ ಆಗಿರುವಂತಹ ನೆರೆಹಾವಳಿಯ ಹಾನಿಯ ಕುರಿತು ಸಂತ್ರಸ್ತರಿಗೆ ಕೂಡಲೇ ಪರಿಹಾರವನ್ನು ಬಿಡುಗೊಡೆಗೊಳಿಸುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತುಕತೆ ನಡೆಯಿತು. ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಅವರನ್ನು ಕಾರವಾರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಭಟ್ಕಳ ಶಾಸಕ ಸುನಿಲ್ ನಾಯ್ಕ್ ಭೇಟಿಯಾಗಿ ಚರ್ಚೆ ನಡೆಸಿದರು. ಮಂಕಿಯಲ್ಲಿನ ನೆರೆ ಸಂತ್ರಸ್ತರ ಮನೆಗಳ ತುರ್ತು ನಿರ್ವಹಣೆಗೆ 10000 ರೂಪಾಯಿ ಮೊತ್ತವು ಅವರ ಖಾತೆಗೆ ನೇರವಾಗಿ ಜಮಾ ಆಗಲಿದೆ ಎಂದು ತಿಳಿಸಿದರು.









