” ಭಾರತಮಾತಾಕೀ ಜೈ ” ಎನ್ನದೆ ಇದ್ರೆ ಯಾವುದೇ ಮುಸ್ಲಿಂರಿಗೂ ಭಾರತದ ನೆಲದಲ್ಲಿ ನಮಾಝ್ ಮಾಡಲು ಒಂದಡಿ ಜಾಗವನ್ನು ಕೊಡಲ್ಲ ; ಪುತ್ತೂರಿನ ಮೊಸರು ಕುಡಿಕೆ ಉತ್ಸವದಲ್ಲಿ ಬಜರಂಗದಳ ಮುಖಂಡ ರಘು ಸಕಲೇಶಪುರ ಘೋಷಣೆ – ಕಹಳೆ ನ್ಯೂಸ್

ಪುತ್ತೂರು : ವಿಶ್ವ ಹಿಂದೂ ಪರಿಷತ್, ಬಜರಂಗದಳ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿ ಆಯೋಜಿಸಿದ ಮೊಸರು ಕುಡಿಕೆ ಉತ್ಸವ ಹಾಗೂ ಶೋಭಾಯಾತ್ರೆಯ ಸಭಾ ಕಾರ್ಯಕ್ರಮದಲ್ಲಿ ಬಜರಂಗದಳದ ಮುಖಂಡ ರಘು ಸಕಲೇಶಪುರ ದಿಕ್ಸೂಚಿ ಭಾಷಣ ಮಾಡಿದರು.
ಬೆಂಗಳೂರಿನ ಬಿಬಿಎಂಪಿ ಅಧಿಕಾರಿಯ ಉದಾಹರಣೆ ನೀಡಿದ ಬಜರಂಗದಳ ಮುಖಂಡ ರಘು ಸಕಲೇಶಪುರ ಬಿಬಿಎಂಪಿಯ ಅವರಣದಲ್ಲಿ ಅಲ್ಲ ಭಾರತಮಾತಾಕೀ ಜೈ ಎನ್ನದೆ ಇದ್ರೆ ಯಾವುದೇ ಮುಸ್ಲಿಂರಿಗೂ ಭಾರತದ ನೆಲದಲ್ಲಿ ನಮಾಝ್ ಮಾಡಲು ಒಂದಡಿ ಜಾಗವನ್ನು ಕೊಡಲ್ಲ ಎಂಬ ಘೋಷಣೆ ಮಾಡಿದ್ದಾರೆ.
Vedio : ವಿಶ್ವ ಹಿಂದೂ ಪರಿಷತ್ ಬಜರಂಗದಳ ಮೊಸರು ಕುಡಿಕೆ ಉತ್ಸವದ ನೇರಪ್ರಸಾರ – ಕಹಳೆ ನ್ಯೂಸ್
https://youtu.be/0gTv-IuVkAM
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಡೆಮಜಲು ಸುಭಾಷ್ ರೈವಹಿಸಿದ್ದರು. ವೇದಿಕೆಯಲ್ಲಿ ಬಜರಂಗದಳ ಮುಖಂಡರಾದ ಮುರಳೀಕೃಷ್ಣ ಹಂಸತ್ತಡ್ಕ , ಶ್ರೀಮತಿ ವಿದ್ಯಾಮಲ್ಯ ಡಾ. ಕೃಷ್ಣಪ್ರಸನ್ನ, ಜನಾರ್ಥನ ಬೆಟ್ಟ, ಸತೀಶ್ , ಶ್ರೀಧರ ತೆಂಕಿಲ, ನವೀನ್ ಕುಲಾಲ್, ಜಯಂತ ಕುಂಜೂರುಪಂಜ, ಹರೀಶ್ ಕುಮಾರ್ ದೋಲ್ಪಾಡಿ ಉಪಸ್ಥಿತರಿದ್ದರು.
ವಿಶಾಕ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮುಖಂಡರುಗಳಾದ ಸಹಜ್ ರೈ ಬಳಜ್ಹ, ಪೂರ್ಣಜಿತ್ ರೈ ಮತ್ತಿತರರು ಉಪಸ್ಥಿತರಿದ್ದರು.









