
ಸುಳ್ಯ : ಹಿಂದುಳಿದ ವರ್ಗಗಳ ಹರಿಕಾರ ಶ್ರೀ ಡಿ. ದೇವರಾಜ ಅರಸು ಅವರ 104ನೇ ಜನ್ಮ ದಿನೋತ್ಸವ ಕಾಂತಮಂಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಆಚರಿಸಲಾಯಿತು. ನಿಲಯ ಸಿಬ್ಬಂದಿ ಚಾಂದ್ ಪಟೇಲ್ ಅವರು ಪ್ರಾಸ್ತಾವಿಕ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಪನ್ಯಾಸಕ ಸಂಜೀವ ಕುದ್ಪಾಜೆ ಅವರು, ದೇವರಾಜ ಅರಸರ ಆದರ್ಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಮಾಜ ಮುಖಿಯಾಗಿ ಬದುಕಿ ಎಂದು ಮಕ್ಕಳಿಗೆ ಹಾರೈಸಿದರು. ಗೌರವ ಉಪಸ್ಥಿತರು ಸುನೀಲ್ ಕೇರ್ಪಳ ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಮುಂದೆ ಬರಬೇಕು ಎಂದರು. ಅಧ್ಯಕ್ಷ ರಿಯಾಝ್ ಕಟ್ಟೆಕಾರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಬಾಲಕರ ನಿಲಯ ಮೇಲ್ವಿಚಾರಕ ವಿಜಯ್ ಅವರು ಸ್ವಾಗತಿಸಿದರು. ವಿದ್ಯಾರ್ಥಿ ಕಿಶೋರ್ ಎಣ್ಮೂರು ಕಾರ್ಯಕ್ರಮ ನಿರೂಪಿಸಿದ್ರೆ, ವಿದ್ಯಾರ್ಥಿ ಬಸವರಾಜ್ ಧನ್ಯವಾದ ಸಮರ್ಪಿಸಿದರು.

















