
ಬೆಳ್ತಂಗಡಿ : ಮಹಾ ವರುಣನ ಆರ್ಭಟಕ್ಕೆ ಕರಾವಳಿ ಜನತೆ ತತ್ತರಿಸಿ ಹೋಗಿದ್ದಾರೆ. ಇನ್ನು ಬೆಳ್ತಂಗಡಿಯಲ್ಲಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾನಿಯಾಗಿದ್ದು, ಜನತೆ ಕಂಗಾಳಗಿದ್ದಾರೆ, ಈ ಹಿನ್ನಲೆಯಲ್ಲಿ ಅನೇಕರು ಸಹಾಯ ಹಸ್ತ ಚಾಚುತ್ತಿದ್ದು, ಕುಂಜರ್ಪ ಫ್ರೆಂಡ್ಸ್ ನ ಯುವಕರು ಕುಂಜರ್ಪ, ವಿದ್ಯಾನಗರ, ಮತ್ತು ರಥಬೀದಿ ವಠಾರದಲ್ಲಿ ಹಣವನ್ನ ಸಂಗ್ರಹಿಸಿದರು. ಸಂಗ್ರಹವಾದ 20,000 ಮತ್ತು ಇತರ ಸಾಮಗ್ರಿಯನ್ನು ಬೆಳ್ತಂಗಡಿಯ ಶ್ರಮಿಕ ಕಾರ್ಯಾಲಯಕ್ಕೆ ನೀಡಲಾಯಿತು.
















