
ಕೊಳಕೆ : ಮೊಬೈಲ್ ಚಾರ್ಜ್ ಇಡುವ ವೇಳೆ ವಿದ್ಯುತ್ ಶಾಕ್ ಹೊಡೆದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ, ಪುತ್ತೂರು ತಾಲೂಕಿನ 34 ನೇ ನೆಕ್ಕಿಲಾಡಿ ಗ್ರಾಮದ, ಕೊಳಕ್ಕೆ ಎಂಬಲ್ಲಿ ನಡೆದಿದೆ. ಕೊಳಕ್ಕೆ ನಿವಾಸಿ ಲಕ್ಷ್ಮಣ ಗೌಡ ಮೃತ ವ್ಯಕ್ತಿ. ವಿದ್ಯುತ್ ಶಾಕ್‍ನಿಂದ ಅಸ್ವಸ್ಥರಾದ ಲಕ್ಷ್ಮಣಗೌಡರನ್ನು ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಸಾವನ್ನಪ್ಪಿದ್ದಾರೆ. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















