
ಬೆಳ್ತಂಗಡಿ ತಾಲೂಕಿನ ಶಾಸಕ ಹರೀಶ್ ಪೂಂಜ ಕೈಗೊಂಡಿರುವ “ಜಲ ಮರುಪೂರಣ ಅಭಿಯಾನ” ಕ್ಕೆ ತಾಲೂಕಿನ ಜನರ ಅಭೂತಪೂರ್ವ ಬೆಂಬಲ ದೊರಕಿದೆ. ತಾಲೂಕಿನ ಹಲವಾರು ಕಡೆಗಳಲ್ಲಿ ಜನರು ನೀರು ಇಂಗಿಸುವ ಕಾರ್ಯ ನಡೆಸುತ್ತಿದ್ದು ಶಾಸಕರೊಂದಿಗೆ ತಾಲೂಕನ್ನು “ಜಲ ಸಂಪದ್ಭರಿತ” ಗೊಳಿಸಲು ಕೈಜೋಡಿಸಿದ್ದಾರೆ. ಶಾಸಕರ ಈ ವಿಭಿನ್ನ ಯೋಜನೆ ತಾಲೂಕಿನಾದ್ಯಂತ ಪ್ರಶಂಸೆಗೆ ಪಾತ್ರವಾಗಿದೆ.














