Monday, March 16, 2026
ಸುದ್ದಿ

ಭತ್ತದ ಗದ್ದೆಯಲ್ಲಿ ಕೃಷಿ ಮಾಡಿದ ಕೆನರಾ ಕಾಲೇಜಿನ ವಿದ್ಯಾರ್ಥಿಗಳು – ಕಹಳೆ ನ್ಯೂಸ್

ಬಂಟ್ವಾಳ: ತುಳು ತಿಂಗಳ ಕಾರ್ತೆಲ್ ಮತ್ತು ಆಟಿ ತಿಂಗಳಲ್ಲಿ ಪರಶುರಾಮ ಸೃಷ್ಟಿಯ ತುಳುನಾಡಿನಲ್ಲಿ ನೇಜಿ ನಾಟಿಯ ಸಮಯ. ಹಿಂದಿನ ಕಾಲದಲ್ಲಿ ಕೃಷಿಯ ಕೆಲಸ ಎಂದರೆ ಜಾತ್ರೆಯ ಸಂಭ್ರಮ. ಭತ್ತದ ಕೃಷಿಯೇ ಜೀವನ, ಜೀವಾಳ ಎಂದು ನಂಬಿರುವ ತುಳುವ ನಾಡಿನ ಪ್ರತಿ ಕೃಷಿಕನೂ ಗದ್ದೆಗಳಲ್ಲಿ ಉಳುಮೆ ಮಾಡಿ ನೇಜಿ ನೆಡುವ ಕಾರ್ಯ ಮಾಡುತ್ತಿದ್ದರು. ಬರಬರುತ್ತಾ ಕೃಷಿಗೆ ಜನರ ಕೊರತೆ ಎದುರಾಗಿ ತಾಂತ್ರಿಕವಾಗಿ ಕೃಷಿ ಮಾಡಲಾರಂಭಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ನೋಡ ನೋಡುತ್ತಿದ್ದಂತೆ ಭತ್ತವನ್ನು ಗದ್ದೆಗೆ ಬಿತ್ತಿ, ಭತ್ತದ ಮಡಿ ತೆಗೆದು, ಗದ್ದೆಯನ್ನು ಹೋರಿ ಅಥವಾ ಕೋಣಗಳ ಮೂಲಕ ಉಳುಮೆ ಮಾಡಿ ಬಳಿಕ ನೇಜಿ ನಾಟಿ ಕೆಲಸಗಳು ನಡೆಯುತ್ತಿತ್ತು. ಬರಬರುತ್ತಾ ಎಲ್ಲವೂ ಮಾಯವಾಗಿ ಯಾಂತ್ರೀಕೃತ ಕೃಷಿ ಆರಂಭವಾಗಿ ಭತ್ತದ ಕೃಷಿಯೇ ನಿಂತು ಹೋಗುವ ಹಂತದಲ್ಲಿ ನಾವಿದ್ದೇವೆ.

ಜಾಹೀರಾತು
ಜಾಹೀರಾತು

ಈ ಕಾಲಘಟ್ಟದಲ್ಲಿ ಮತ್ತೆ ಕೃಷಿ ಪದ್ದತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಂಗಳೂರು ಕೆನರಾ ಕಾಲೇಜು ತುಳು ಸಂಘ ಪ್ರಯತ್ನ ಮಾಡುತ್ತಿದೆ. ಅಲ್ಲಿನ ವಿದ್ಯಾರ್ಥಿಗಳಿಗೆ ಕೃಷಿ ಚಟುವಟಿಕೆಯ ಪ್ರಾತ್ಯಕ್ಷಿಕೆ ನೀಡಿ ಕೆಸರಿನಲ್ಲಿ ಸಂಭ್ರಮಿಸಿದರು.

ಮಂಗಳೂರು ಕೆನರಾ ಕಾಲೇಜಿನ ಸುಮಾರು 40ಕ್ಕೂ ಅಧಿಕ ವಿದ್ಯಾರ್ಥಿಗಳು ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮದ ಆಲಾಡಿ ನಿವಾಸಿ ಉದ್ಯಮಿ ಮಹಾಬಲ ಕೊಟ್ಟಾರಿ ಅವರ ಗದ್ದೆಯ ನೇಜಿ ತೆಗೆದರು. ಬಳಿಕ ಟಿಲ್ಲರ್ ಮೂಲಕ ಗದ್ದೆ ಉಳುಮೆ ಮಾಡಿದರು. ಉಳುಮೆ ಮಾಡಿ ಹದ ಮಾಡಿದ ಗದ್ದೆಯಲ್ಲಿ ನೇಜಿ ನೆಟ್ಟು ಕೃಷಿ ಪರಂಪರೆಯ ಅರ್ಥವನ್ನು ಸವಿದರು. ನೇಜಿ ನೆಡುವ ಸಂದರ್ಭದಲ್ಲಿ ಪಾಡ್ದನ ಹಾಡಿದರು. ಬಳಿಕ ಗದ್ದೆಯಲ್ಲಿ ಆಟ ಆಡಿದರು.

ಕೇವಲ ಪಾಠ ಮಾತ್ರ ಸಾಲದು ಇಂತಹ ಕಾರ್ಯಕ್ರಮಗಳು ಮಕ್ಕಳ ಬೆಳವಣಿಗೆ ದಾರಿ ದೀಪವಾಗಲಿದೆ. ಕೃಷಿ ಸಂಸ್ರ್ಕತಿಯ ನಾಡಿನಲ್ಲಿ ಜೀವನ ಮಾಡುವ ಪ್ರತಿಯೊಬ್ಬ ನಾಗರಿಕ ನಿಗೂ ಕೃಷಿಯ ಬಗ್ಗೆ ಆಸಕ್ತಿ ಮತ್ತು ಮಾಹಿತಿ ಬೇಕಾಗಿದೆ, ಅನಿಟ್ಟಿನಲ್ಲಿ ಕೆನಾರಾ ಕಾಲೇಜಿನ ತುಳು ಸಂಘ ಉತ್ತಮ ಕೆಲಸ ಮಾಡಿದೆ. ಇಂತಹ ತುಳು ಸಂಸ್ರ್ಕತಿಯ ಸತ್ವವನ್ನು ವಿದ್ಯಾರ್ಥಿಗಳಿಗೆ ನೆನಪಿಸುವ ಕೆಲಸ ಮಾಡುವ ಇವರ ಮನಸ್ಸು ಇನ್ನೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಸಹಾಯವಾಗಲಿ ಎಂದು ಗದ್ದೆಯ ಮಾಲಕ ಮಹಾಬಲ ಕೊಟ್ಟಾರಿ ಹೇಳಿದರು.