Thursday, March 19, 2026
ಸುದ್ದಿ

ಮಂಗಳೂರು:‘ಕಲಿಕೆಯೊಂದಿಗೆ ಗಳಿಕೆಗೂ ಸೈ ಎಂದ ವಿದ್ಯಾರ್ಥಿಗಳು’ – ಕಹಳೆ ನ್ಯೂಸ್

ಮಕ್ಕಳಿಗೆ ರಜೆ ಇದ್ದರೆ ಸಾಕು ಟಿವಿ, ಮೊಬೈಲ್ ನೋಡುತ್ತಾ ಕಾಲ ಕಳೆಯುವ ಈ ಕಾಲದಲ್ಲಿ, ಬೆಂದೂರು ಸೈಂಟ್ ಆ್ಯಗ್ನೆಸ್ ಖಾಸಗಿ ಅನುದಾನಿತ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಮಕ್ಕಳು ಕೈಯಲ್ಲಿ ಪೇಪರ್ ಹಿಡಿದು ಬ್ಯಾಗ್ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ಲಾಸ್ಟಿಕ್ ಬದಲು ಪರಿಸರಸ್ನೇಹಿ ಪೇಪರ್ ಬ್ಯಾಗ್ ತಯಾರಿಸಿ, ಮನೆ ಹತ್ತಿರದ ಅಂಗಡಿಗಳಿಗೆ ನೀಡಿ ಕಲಿಕೆಯೊಂದಿಗೆ ಗಳಿಕೆಯಲ್ಲಿ ನಿರತರಾಗಿದ್ದಾರೆ. ಮೊದಲು ತಯಾರಿಸಿದ ಬ್ಯಾಗನ್ನು ಶಾಲೆಯ ಸುತ್ತಮುತ್ತಲಿರುವ ಅಂಗಡಿಗಳಿಗೆ ನೀಡಿದಾಗ, ವಿದ್ಯಾರ್ಥಿಗಳಿಗೆ ಅಂಗಡಿಯವರು ಚಾಕೋಲೇಟ್, ಇತರ ಸಿಹಿತಿಂಡಿ ನೀಡಿ ಖುಷಿ ವ್ಯಕ್ತಪಡಿಸಿದ್ದಾರೆ. ಇದರಿಂದ ಪ್ರೇರಣೆಗೊಂಡ ಮಕ್ಕಳು ತಮ್ಮ ಮನೆ ಪರಿಸರದಲ್ಲಿರುವ ಅಂಗಡಿಗಳಿಗೆ ಬ್ಯಾಗ್ ತಯಾರಿಸಿ ನೀಡಿದ್ದಾರೆ. ಅಂಗಡಿಯವರು ಸುಮಾರು ಅರ್ಧ ಕೆಜಿ ಬ್ಯಾಗ್‍ಗೆ 200 ರೂ.ಗಳಷ್ಟು ಹಣ ನೀಡಿದ್ದು, ಕಲಿಕೆಯೊಂದಿಗೆ ಗಳಿಕೆಯ ಸಂಭ್ರಮದಲ್ಲಿದ್ದಾರೆ ವಿದ್ಯಾರ್ಥಿಗಳು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು