
ಬಂಟ್ವಾಳ : ಸರಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ದಕಟ್ಟೆಯ ಗ್ರಂಥಪಾಲಕ ಶ್ರೀನಿವಾಸ ಇವರಿಗೆ ಡಾಕ್ಟರೇಟ್ ಪದವಿ ಲಭಿಸಿದೆ. ತಮಿಳುನಾಡಿನ ತಿರುಚಿನಾಪಲ್ಲಿ ಭಾರತೀದಾಸನ್ ವಿಶ್ವವಿದ್ಯಾಲಯದಲ್ಲಿ ಇವರು ಮಂಡಿಸಿದ ಮ್ಯಾಪಿಂಗ್ ಅಫ್ ರೀಸೆರ್ಚ್ ಪ್ರೊಡಕ್ಟಿವಿಟಿ ಇನ್ ಗ್ರೀನ್ ಏಕನೊಮಿಕ್ಸ್: ಎ ಬಿಬಿಲಿಯೊಮೆಟ್ರಿಕ್ ಸ್ಟಡಿ ಪ್ರಬಂಧಕ್ಕೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಇವರು ಮೂಲತಃ ಚಿಕ್ಕಬಳ್ಲಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕು ನಾಗಮಂಗಲ ಗ್ರಾಮದ ಬಡ ಕೃಷಿಕ ಕುಟುಂಬದಲ್ಲಿ ಜನಿಸಿದವರು. ತನ್ನ ವಿದ್ಯಾಭ್ಯಾಸ ಮುಗಿಸಿ 2005 ರಿಂದ 2010ವರೆಗೆ ಚಿಕ್ಕಬಳ್ಳಾಪುರ ಪದವಿ ಪೂರ್ವ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ, ಪ್ರಸ್ತುತ 2010ರಿಂದ ಸಿದ್ದಕಟ್ಟೆ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಿ.ಎಚ್.ಡಿ.ಪದವಿ ಪಡೆದ ಇವರಿಗೆ ಕಾಲೇಜು ಪ್ರಾಂಶುಪಾಲ ಪ್ರೊ; ಸತ್ಯನಾರಾಯಣ ಭಟ್, ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು, ಕಾಲೇಜು ಅಭಿವೃದ್ದಿ ಸಮಿತಿ ಕಾರ್ಯಾಧ್ಯಕ್ಷ ಸಂದೇಶ್, ಕಾಲೇಜಿನ ಪ್ರಾಧ್ಯಾಪಕರು, ಭೋದಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ. ಇವರಿಗೆ ಸೈಂಟ್ ಜೋಸೆಫ್ ಕಾಲೇಜು ಗ್ರಂಥಪಾಲಕ ಎಮ್.ದೊರೈರಾಜನ್ ಮಾರ್ಗದರ್ಶನ ನೀಡಿದ್ದರು.















