Wednesday, March 18, 2026
ಸುದ್ದಿ

ರೈತರಿಗೆ ‘ಋಣ ಪರಿಹಾರ’ ಯೋಜನೆ: ಕಹಳೆ ನ್ಯೂಸ್

ಬ್ಯಾಂಕು, ಹಣಕಾಸು ಸಂಸ್ಥೆಗಳ ಸಾಲದ ನೋಟಿಸುಗಳಿಂದಾಗಿ ಮಾನಸಿಕ ಹಿಂಸೆಗೆ ಒಳಗಾಗುವ ರೈತರು ಆತ್ಮಹತ್ಯೆಗೆ ಶರಣಾಗಿರುವ ಸಾವಿರಾರು ಘಟನೆಗಳು ನಡೆದಿವೆ. ಸಾಲದ ಸುಳಿಗೆ ಸಿಲುಕಿದ ರೈತರ ಸಾಲವನ್ನು ಪಾವತಿಸಲು ಕೇರಳ ಮಾದರಿಯಲ್ಲಿ ಕಾಯಿದೆ ರೂಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ದೃತಿಗೆಟ್ಟ ರೈತರಿಗೆ ನೆರವು ನೀಡಲು ರಾಜ್ಯ ಸರ್ಕಾರ ಕೇರಳ ಮಾದರಿಯಲ್ಲಿ ‘ಋಣ ಪರಿಹಾರ ಆಯೋಗ’ ಕಾನೂನು ಸಿದ್ಧಪಡಿಸಿದೆ. ಇದು ರೈತರ ಸಾಲ ಮನ್ನಾ, ಬಡವರ ಬಂಧು ಯೋಜನೆಗಳ ತರುವಾಯ ‘ಋಣ ಪರಿಹಾರ’ ಮಹತ್ವದ ಯೋಜನೆಯಾಗಲಿದೆ. ಈ ಆಯೋಗ ರೈತರು ಪಡೆದಿರುವ ಸಾಲಕ್ಕಿಂತ ಹೆಚ್ಚು ಬಡ್ಡಿಯನ್ನು ಪಾವತಿಸಿ ಸಂಕಷ್ಟಕ್ಕೆ ಒಳಗಾಗುತ್ತಾರೆ. ಇನ್ನೊಂದೆಡೆ ರೈತರು ಬರಗಾಲ, ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾಗಿ ಸಾಲ ಪಾವತಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗುತ್ತದೆ. ಇಂತಹ ಸಂದರ್ಭದಲ್ಲಿ ಋಣ ಪರಿಹಾರ ಆಯೋಗದ ನೆರವು ಪಡೆಯಬಹುದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ರೈತರ ಸ್ಥಿತಿಗತಿಯ ಪರಿಶೀಲನೆ ಬ್ಯಾಂಕುಗಳಿಂದ ಅಥವಾ ಸಾಲದಾತ ಸಂಸ್ಥೆಗಳಿಂದ ನೋಟಿಸ್ ಬಂದಾಗ ರೈತರು ಗಾಬರಿಯಾಗುತ್ತಾರೆ. ಸ್ವಾಭಿಮಾನಿ ರೈತರು ಮನನೊಂದು ಆತ್ಮಹತ್ಯೆಗೂ ಮುಂದಾಗುತ್ತಾರೆ. ಅಂತಹ ರೈತರಿಗೆ ಪರಿಹಾರ ಒದಗಿಸಲು ಆಯೋಗ ರಚಿಸಲಾಗುತ್ತಿದೆ.

ಜಾಹೀರಾತು
ಜಾಹೀರಾತು