Wednesday, September 9, 2026
ಸುದ್ದಿ

ಕೊಲೆ ಯತ್ನ ಪ್ರಕರಣ : ಆರೋಪಿಗೆ ಜಾಮೀನು – ಕಹಳೆ ನ್ಯೂಸ್

ಪುತ್ತೂರು : ಮೋಟಾರು ಸೈಕಲ್‍ನಲ್ಲಿ ಹೋಗುತ್ತಿದ್ದ ವೇಳೆ ಹೊಂಡಾ ಆಕ್ಟೀವದಲ್ಲಿ ಹಿಂಬಾಲಿಸಿಕೊಂಡು ಬಂದು ಅಡ್ಡಗಟ್ಟಿ, ತಡೆದು ನಿಲ್ಲಿಸಿ ಕೊಲೆಗೆ ಯತ್ನಿಸಿದ ಘಟನೆ ಪುತ್ತೂರು ಕಸಬಾ ಗ್ರಾಮದ ಕೊಂಬೆಟ್ಟು ಬಂಟರ ಭವನ ಕ್ರಾಸ್ ಬಳಿ ದಿನಾಂಕ 01-06-2019ರ ನಡೆದಿತ್ತು. ಮಧ್ಯಾಹ್ನ 1.30ರ ಸುಮಾರಿಗೆ ಶರತ್ ರೈಯವರನ್ನು ಆರೋಪಿ ವಿನೋದ್ ಎಂಬುವವರು, ಹೊಂಡಾ ಆಕ್ಟೀವದಲ್ಲಿ ಹಿಂಬಾಲಿಸಿ ಅಡ್ಡಗಟ್ಟಿ ತಡೆದು ನಿಲ್ಲಿಸಿ ಸ್ಕೂಟರ್‍ ನಿಂದ ಇಳಿದು ಮಾರಾಕಾಸ್ತ್ರದಿಂದ ಎಡಗೈಯ ರಟ್ಟೆಗೆ ಹಾಗೂ ಬೆನ್ನಿಗೆ ಕಡಿದು ಗಾಯಗೊಳಿಸಿ ಕೊಲೆ ಮಾಡಲು ಯತ್ನಿಸಿದ್ದರು.

ಜಾಹೀರಾತು

ಈ ಕುರಿತಾಗಿ ಆರೋಪಿ ವಿರುದ್ಧ ಪುತ್ತೂರು ನಗರ ಪೋಲಿಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಕಲಂ 341, 324, ಮತ್ತು 307ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಕೊಲೆ ಯತ್ನ ಪ್ರಕರಣದಲ್ಲಿ ದಸ್ತಗಿರಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ವಿನೋದ್ ಬಿ. ಮಾನ್ಯ 5ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು ಮಾನ್ಯ ನ್ಯಾಯಾಲಯ ಜಾಮೀನು ಅರ್ಜಿಯನ್ನು ಪುರಸ್ಕರಿಸಿ ಆದೇಶಿಸಿದೆ. ಆರೋಪಿ ವಿನೋದ್ ಪರ ನ್ಯಾಯವಾದಿಗಳಾದ ಶ್ಯಾಮ್ ಪ್ರಸಾದ್ ಕೈಲಾರ್, ಸುರಕ್ಷಿತ್ ಸಿ.ಹೆಚ್. ಮತ್ತು ಜುಬೇದಾ ಸರಳಿಕಟ್ಟೆ ವಾದಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು