
ಮಂಗಳೂರು : ಹೆಲ್ಮೆಟ್ ಧರಿಸದೆ ಬೈಕ್ ಸವಾರಿ ಮಾಡುತ್ತಿದ್ದವನ ಬೈಕ್‍ನ ಫೋಟೊ ತೆಗೆದ ಕರ್ತವ್ಯ ನಿರತ ಟ್ರಾಪಿಕ್ ಕಾನ್‍ಸ್ಟೇಬಲ್‍ಗೆ ಬೈಕ್ ಸವಾರ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ ಘಟನೆ ತೊಕ್ಕೊಟ್ಟು ಫ್ಲೈ ಓವರ್ ಸಮೀಪದಲ್ಲಿ ನಡೆದಿದೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣಾ ಸಿಬ್ಬಂದಿ ಸಂಗಣ್ಣ ಗೌಡ ಹಲ್ಲೆಗೊಳಗಾದವರು. ಬೈಕ್ ಸವಾರ ಮದನಿ ನಗರದವನೆಂದು ತಿಳಿದು ಬಂದಿದ್ದು, ಆತನ ವಿರುದ್ಧ ಸಂಗಣ್ಣ ಗೌಡ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಆರೋಪಿಯ ಶೋಧ ನಡೆಸುತ್ತಿದ್ದಾರೆ ಎನ್ನಲಾಗಿದೆ.














