
ಉಪ್ಪಿನಂಗಡಿ ಸಮೀಪ ಬೇರಿಕೆ ಎಂಬಲ್ಲಿ ಜೂನ್ 12ರಂದು ಕರ್ತವ್ಯ ನಿರತ ಲೈನ್‍ಮ್ಯಾನ್ ದಾವಣಗೆರೆ ಮೂಲದ ಉಪ್ಪಿನಂಗಡಿ ಮೆಸ್ಕಾಂನ ಉದ್ಯೋಗಿ ಮಿಟ್ಯಾ ನಾಯಕ್ ಎಂಬವರು ಬುಧವಾರ ಮೈನ್ ಲೈನ್ ದುರಸ್ಥಿ ಹಿನ್ನಲೆ ಬೇರಿಕೆ ಪೊಲೀಸ್ ವಸತಿ ಗೃಹ ಬಳಿ ಲೈನ್ ಆಫ್ ಮಾಡಿದ್ದು, ಸಂಜೆ ವೇಳೆ ದುರಸ್ಥಿ ಮುಗಿಸಿ ವಿದ್ಯುತ್ ಪರಿಕರದಲ್ಲಿ ಚಾಲನೆ ನೀಡುತ್ತಿದ್ದಂತೆ ವಿದ್ಯುತ್ ಆಘಾತಕ್ಕೊಳಗಾಗಿ ಕುಸಿದು ಬಿದ್ದಿದ್ದಾರೆ.
ಆ ವೇಳೆ ಸಹುದ್ಯೋಗಿಗಳು ನೆರೆದ ಸಾರ್ವಜನಿಕರು 108 ಆ್ಯಂಬ್ಯುಲೆನ್ಸ್ ಮೂಲಕ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದರಾದರೂ ಗಂಭೀರ ಗಾಯಗೊಂಡಿದ್ದ ಮಿಟ್ಯಾ ದಾರಿ ಮದ್ಯದಲ್ಲೇ ಕೊನೆಯುಸಿರೆಳೆದಿದ್ದಾಎರೆ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅಧಿಕಾರಿಗಳು ಭೇಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದಾರೆ.









