Tuesday, April 28, 2026
ರಾಜಕೀಯಸುದ್ದಿ

ಅಮಿತ್‌ ಶಾಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ವಾಸಿಸುತ್ತಿದ್ದ ನಿವಾಸ – ಕಹಳೆ ನ್ಯೂಸ್

ನವದೆಹಲಿ: ನರೇಂದ್ರ ಮೋದಿ ಸಂಪುಟ ಸೇರಿರುವ ಅಮಿತ್‌ ಶಾಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ವಾಸಿಸುತ್ತಿದ್ದ ನಿವಾಸವನ್ನು ನೀಡುವ ಸಾಧ್ಯತೆಯಿದೆ. ಕೇಂದ್ರ ದೆಹಲಿಯಲ್ಲಿನ ಕೃಷ್ಣಾ ಮೆನನ್‌ ಮಾರ್ಗ್‌ನಲ್ಲಿರುವ ನಿವಾಸಕ್ಕೆ 2004ರಲ್ಲಿ ವಾಜಪೇಯಿ ತೆರಳಿದ್ದರು. ಅಧಿಕಾರದಿಂದ ಕೆಳಗಿಳಿಯುತ್ತಿದ್ದಂತೆಯೇ ಅವರಿಗೆ ಈ ಸರ್ಕಾರಿ ನಿವಾಸ ನೀಡಲಾಗಿತ್ತು. ಕಳೆದ ವರ್ಷದ ವಾಜಪೇಯಿ ನಿಧನರಾದ ನಂತರ ನವೆಂಬರ್‌ನಲ್ಲಿ ಅವರ ಕುಟುಂಬ ಈ ಮನೆ ಖಾಲಿ ಮಾಡಿತ್ತು.

ಮೂಲಗಳ ಪ್ರಕಾರ ಶಾ ಇತ್ತೀಚೆಗೆ ಈ ಮನೆಗೆ ಭೇಟಿ ನೀಡಿ, ಕೆಲವು ಬದಲಾವಣೆ ಮಾಡುವಂತೆ ಸೂಚಿಸಿದ್ದರು. ಅದಕ್ಕೆ ಅನುಗುಣವಾಗಿ ನವೀಕರಣ ಕಾರ್ಯ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಇನ್ನೊಂದೆರಡು ತಿಂಗಳಲ್ಲಿ ನವೀಕರಣ ಪ್ರಕ್ರಿಯೆ ಮುಗಿಯಲಿದೆ ಎನ್ನಲಾಗಿದೆ. ಸದ್ಯ ಅಕ್ಬರ್‌ ರೋಡ್‌ ನಿವಾಸದಲ್ಲಿ ಶಾ ವಾಸಿಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಯಾವುದೇ ಸರ್ಕಾರಿ ಬಂಗಲೆಯನ್ನು ಸ್ಮಾರಕವನ್ನಾಗಿ ಮಾಡುವುದಿಲ್ಲ ಎಂದು ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಿರ್ಧಾರ ತೆಗೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ವಾಜಪೇಯಿ ನಿವಾಸವನ್ನು ಸ್ಮಾರಕವನ್ನಾಗಿಸದೇ, ಮರುಬಳಕೆ ಮಾಡಲಾಗುತ್ತಿದೆ.