
ಬಂಟ್ವಾಳ : ಜೀವನದ ಪ್ರತಿ ಕ್ಷಣದಲ್ಲಿಯೂ ಸೇವೆ ಮಾಡುವ ಮನಸ್ಥಿತಿ ಎಲ್ಲರಿಗೂ ಬರಲು ಸಾಧ್ಯವಿಲ್ಲ ಅದಕ್ಕೊಂದು ಸೂಕ್ತ ವೇದಿಕೆ ಬೇಕು. ಮನೋಭಾವ ಮತ್ತು ವೇದಿಕೆ ಎರಡು ಉತ್ತಮವಾಗಿದ್ದಾಗ ಸೇವೆ ಮತ್ತು ತ್ಯಾಗ ಎಂಬ ಎರಡು ಧ್ಯೇಯಗಳನ್ನು ನಾವು ಬಿಡದಿದ್ದಾಗ ಮಾತ್ರ ನಿಸ್ವಾರ್ಥವಾದ ಮಹಾನ್ ಕಾರ್ಯಗಳು ನಮಗರಿವಿಲ್ಲದೆ ದೇವರ ದಯೆಯಿಂದ ನಮ್ಮಿಂದಲೇ ನಡೆದು ಹೋಗುತ್ತದೆ. ಇಲ್ಲಿ ಹೇಳ ಹೊರಟಿರುವುದು ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) ಎಂಬ ಸಂಸ್ಥೆಯ 33ನೇ ತಿಂಗಳ ಸೇವಾ ಚಟುವಟಿಕೆಯು ಇತ್ತೀಚಿಗೆ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ಸಮೀಪದ ನಡುಮೊಗರು ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2019-2020ನೇ ಸಾಲಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಮತ್ತು ಲೇಖನ ಸಾಮಗ್ರಿಗಳ ವಿತರಣೆ ಕಾರ್ಯಕ್ರಮ ನಡೆಯಿತು. ಮತ್ತು ಶೈಕ್ಷಣಿಕ ಸೇವಾ ಯೋಜನೆಯಲ್ಲಿ ಗುರುತಿಸಲಾದ ಸಂಸ್ಥೆಯ ಸೇವಾ ಮನೋಬಾಂಧವರ ಇಬ್ಬರು ಮಕ್ಕಳ ಶಿಕ್ಷಣಕ್ಕೆ ರೂ.20,000 ಮತ್ತು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ ಮಂಗಳೂರು ತಾಲೂಕು ಗುರುಪುರ ಮುಳೂರು ನಡುಗುಡ್ಡೆ ದಿವಂಗತ ಶೇಖರ್ ಪೂಜಾರಿಯವರ ಇಬ್ಬರು ಮಕ್ಕಳ ಶಿಕ್ಷಣಕ್ಕೆ ರೂ.20,000 ಚೆಕ್ ಹಸ್ತಾಂತರ ಕಾರ್ಯಕ್ರಮ ಶಾಲೆಯಲ್ಲಿ ನಡೆಯಿತು.

ಹಿರಿಯರು, ಮಾರ್ಗದರ್ಶಕರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ನಡುಮೊಗರು ಗುತ್ತು ಶ್ರೀಯುತ ಶಿವರಾಮ ಶೆಟ್ಟಿಯವರು ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) ಸಂಸ್ಥೆಯ ಕಾರ್ಯ ವೈಖಿರಿಯ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿ ಶುಭ ಹಾರೈಸಿದರು. ಸಂಸ್ಥೆಯ ಸಕ್ರಿಯ ಸದಸ್ಯರಾದ ಕೂರಿಯಾಳ ಜಗದೀಶ್ ಭಂಡಾರಿಯವರು ಸಂಸ್ಥೆಯ ಬಗ್ಗೆ ಕಿರು ಪರಿಚಯವನ್ನು ನೀಡಿದರು.

ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ನವೀನ್ ಪಿ ಮಿಜಾರು, ಉಪಾಧ್ಯಕ್ಷೆ ಶ್ಯಾಮಲಾ ಕುಳಾಯಿ, ಖಜಾಂಚಿ ಚಂದ್ರಹಾಸ ಕೋಟ್ಯಾನ್ ಕುಪ್ಪೆಪದವು, ಗ್ರಾಮ ಪಂಚಾಯತ್ ಸದಸ್ಯರಾದ ಅದಂ ಕುಂಞ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಚಂದ್ರಾಹಸ ಶಂಕರಬೆಟ್ಟು, ಯುವಕ ಮಂಡಲ(ರಿ.) ನಡುಮೊಗರು ಉಪಾಧ್ಯಕ್ಷರಾದ ರಮೇಶ್ ಪೂಜಾರಿ ಡೆಚ್ಚಾರು, ಶ್ರೀ ರಾಮಾಂಜನೆಯ ಗೆಳೆಯರ ಬಳಗ(ರಿ.) ಮೈರ ಇದರ ಅಧ್ಯಕ್ಷರಾದ ಉಮೇಶ್ ಪೂಜಾರಿ ಮೈರ, ಪುರೋಹಿತರಾದ ನವೀನ್ ಶಾಂತಿ ಅಡ್ಯಾಲ್, ವಿದ್ಯಾರ್ಥಿಗಳ ಪೋಷಕರು, ಹಳೆ ವಿದ್ಯಾರ್ಥಿಗಳು, ಯುವಕ ಮಂಡಲ(ರಿ.) ಸದಸ್ಯರು, ಶ್ರೀ ರಾಮಾಂಜನೆಯ ಗೆಳೆಯರ ಬಳಗ(ರಿ.) ಸದಸ್ಯರು, ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) ನಿರ್ವಾಹಕರು ಮತ್ತು ಸದಸ್ಯರು ಹಾಗೂ ಶಾಲಾ ಶಿಕ್ಷಕ ವೃಂದ ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.

ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) ಕಳೆದ 33 ತಿಂಗಳುಗಳಿಂದ ಸಮಾಜಮುಖಿ ಸೇವಾ ಕಾರ್ಯ ಮಾಡುತ್ತ ಬಂದಿದ್ದು, 92 ಸೇವಾ ಯೋಜನೆಯ ಮೂಲಕ 25 ಲಕ್ಷ ಅಧಿಕ ಧನ ಸಹಾಯವನ್ನು ಈ ಸಮಾಜದ ಅಶಕ್ತರಿಗೆ ನೀಡಿದೆ.

















