Thursday, March 19, 2026
ಸುದ್ದಿ

ಬಾವಿಗೆ ಬಿದ್ದು ಮೃತಪಟ್ಟ ಕಾರ್ಮಿಕ – ಕಹಳೆ ನ್ಯೂಸ್

ಗಂಜಿಮಠ: ಇಲ್ಲಿನ ಸ್ಥಳೀಯ ಪಂಪ್ ಒಂದರಲ್ಲಿ ಪಂಪ್‍ನ ಬಾವಿಯ ಸ್ಲಾಬ್ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಗುರುವಾರ ನಡೆದಿದೆ. ಸಿದ್ದಕಟ್ಟೆ ನಿವಾಸಿ ವೆಂಕಪ್ಪ ಮೃತಪಟ್ಟ ದುರ್ದೈವಿ. ಅಶೋಕ್ ಶೇಟ್ ಎಂಬುವವರು ಗಾಯಗೊಂಡಿದ್ದಾರೆ. ಗಂಜಿಮಠದ ಬಲ್ಲಾಳ್ ಟೈಲ್ಸ್ ಬಳಿಯ ಪೆಟ್ರೋಲ್ ಪಂಪ್‍ನಲ್ಲಿ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಸ್ಲಾಬ್ ಕೆಲಸ ಮಾಡುವ ಸಮಯದಲ್ಲಿ ಹಾಕಲಾಗಿದ್ದ ಸ್ಲಾಬ್ ಮುರಿದು 2 ಕಾರ್ಮಿಕರು ಬಾವಿಗೆ ಬಿದ್ದಿದ್ದಾರೆ ಎಂದು ವರದಿಯಾಗಿದೆ. ಬಜಪೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು