
ಪುಲ್ವಾಮಾದ ಪಂಜ್ರಾನ್ ಲಾಸಿಪೋರಾ ಪ್ರದೇಶದಲ್ಲಿ ಸೇನಾ ಪಡೆಗಳು ಗುರುವಾರ ಸಂಜೆಯಿಂದ ಆರಂಭಿಸಿದ ಭಾರೀ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರನ್ನು ಹತ್ಯೆಗೈಯಲಾಗಿದೆ.
ಉಗ್ರರನ್ನು ಸಂಜೆ ಸುತ್ತುವರಿದಿದ್ದ ಸೇನಾ ಪಡೆಗಳು ರಾತ್ರಿಯಿಡೀ ಗುಂಡಿನ ಚಕಮಕಿ ನಡೆಸಿದ್ದಾರೆ. ಗುಂಡಿನ ಕಾಳಗ ನಾಲ್ವರು ಉಗ್ರರ ಹತ್ಯೆಯಲ್ಲಿ ಅಂತ್ಯವಾಗಿದೆ. ಸ್ಥಳದಲ್ಲಿ ಇನ್ನೂ ಕೆಲ ಉಗ್ರರಿರುವ ಸಾಧ್ಯತೆ ಹಿನ್ನಲೆ ಹುಡುಕಾಟ ಮುಂದುವರಿದಿದೆ. ಉಗ್ರರ ಬಳಿಯಿದ್ದ 3 ಎಕೆ ಸರಣಿಯ ಗನ್‍ಗಳು ಮತ್ತು ಶಸ್ತ್ರಾಸ್ತ್ರಗಳನ್ನುವಶಕ್ಕೆ ಪಡೆದಿದ್ದಾರೆ.
ಅನಂತ್‍ನಾಗ್‍ನಲ್ಲಿ ಸೈನಿಕರೊಬ್ಬರನ್ನು ಉಗ್ರರು ಗುಂಡಿಕ್ಕಿ ಹತ್ಯೆಗೈದ ಬಳಿಕ ಈ ಕಾರ್ಯಾಚರಣೆ ನಡೆದಿದೆ.















