
ಡಾಲಿ ಧನಂಜಯ್ ಸದ್ಯದ ಮಟ್ಟಿಗೆ ಸ್ಯಾಂಡಲ್‍ವುಡ್‍ನ ಬಹುಬೇಡಿಕೆಯ ಖಳನಾಯಕ. ‘ಟಗರು’ ಧನಂಜಯ್‍ಗೆ ತಂದು ಕೊಟ್ಟ ಹೆಸರಿನಿಂದಾಗಿ ಒಬ್ಬ ಸಾಧಾರಣ ಹೀರೋ ಆಗಿದ್ದ ಧನಂಜಯ್‍ನನ್ನು ಸ್ಟಾರ್ ವಿಲನ್ ಪಟ್ಟಕ್ಕೇರಿಸಿತು.
ಧನಂಜಯ್ ಕೈಯಲ್ಲಿ ಸಾಲು ಸಾಲು ಸಿನೆಮಾಗಳಿವೆ. ಅವೆಲ್ಲವೂ ಸ್ಟಾರ್ ನಟರ ಸಿನೆಮಾಗಳೇ ಎಂಬುದು ಸಂತಸಕರ ಸಂಗತಿ. ದರ್ಶನ್ ಜೊತೆಗೆ ಯಜಮಾನ ನಂತರ ಪವರ್ ಸ್ಟಾರ್ ಜೊತೆಗೆ ‘ಯುವರತ್ನ’, ಧ್ರುವ ಸರ್ಜಾ ಜೊತೆ ‘ಪೊಗರು’, ಜಗ್ಗೇಶ್ ಜೊತೆಗೆ ‘ತೋತಾಪುರಿ’, ಮತ್ತು ದುನಿಯಾ ವಿಜಯ್ ಜೊತೆಗೆ ‘ಸಲಗ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಸಲಗ ಚಿತ್ರದ ಸ್ಟಿಲ್‍ಗಳು ರಿವೀಲ್ ಆಗಿದ್ದು ಧನಂಜಯ್ ಪಾತ್ರ ಪರಿಚಯವಾಗಿದೆ.

ಡಾಲಿ ಇಲ್ಲಿ ಬೆಂಗಳೂರು ನಗರ ಆರಕ್ಷಕ ಠಾಣಾ ಪೊಲೀಸ್ ಆಗಿ ತಮ್ಮ ಖದರ್ ತೋರಿಸಲಿದ್ದಾರೆ. ಅಲ್ಲದೆ. ಫೋಟೋದಲ್ಲಿ ಕಾಣುವಂತೆ ಧನಂಜಯ್ ಅಯ್ಯಪ್ಪ ಮಾಲಾಧಾರಿಯಾಗಿದ್ದಾರೆ. ವಿಜಯ್ ಕಾಲರ್ ಹಿಡಿದು ಮೇಜಿನ ಮೇಲೆ ಕಾಲಿಟ್ಟಿರುವ ಸ್ಟಿಲ್‍ಗಳು ಎಲ್ಲೆಡೆ ವೈರಲ್ ಆಗಿದೆ. ಅದರಲ್ಲಿ ಧನಂಜಯ್ ಬೂಟನ್ನು ಧರಿಸಿದ್ದಾರೆ. ಅಯ್ಯಪ್ಪ ಮಾಲಾಧಾರಿಯಾದವನು ಚಪ್ಪಲಿ ಹಾಕಬಾರದೆಂಬುದು ನಿಯಮ ಆದರೆ ತಮ್ಮ ವೃತ್ತಿಗನುಗುಣವಾಗಿ ನಿಯಮದಲ್ಲಿ ಸಡಿಲಿಕೆಯೂ ಇರುತ್ತದೆ. ಅದೇನೇ ಇರಲಿ ಧನಂಜಯ್ ಮತ್ತು ವಿಜಯ್ ಕಾಂಬಿನೇಷನ್ ನೋಡಲು ಅಭಿಮಾನಿಗಳು ಕಾಯುತ್ತಿರುವುದಂತೂ ಸುಳ್ಳಲ್ಲ.

ಇದರ ಜೊತೆಗೆ ಸೂರಿ ನಿರ್ದೇಶನದ ‘ಪಾಪ್‍ಕಾರ್ನ್ ಮಂಕಿ ಟೈಗರ’ ಮತ್ತು ‘ಡಾಲಿ’ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.
ಭಾರವಿ ಫಿಲ್ಮ್ ಬ್ಯೂರೋ, ಕಹಳೆ ನ್ಯೂಸ್














